ಹುಬ್ಬಳ್ಳಿ  : ರಾಜ್ಯ ರಾಜಕಾರಣದಲ್ಲಿ ಉಪ ಚುನಾವಣಾ ಕಣ ರಂಗೇರಿಗೆ. ವಿವಿಧ ಪಕಷಗಳ ಮುಖಂಡರು ತಮ್ಮದೇ ಗೆಲುವಿನ ವಿಶ್ವಾಸದಲ್ಲಿದ್ದಾರೆ. 

ಉಮೇಶ್ ಜಾಧವ್ ರಾಜೀನಾಮೆಯಿಂದ ತೆರವಾಗಿದ್ದ ಕುಂದಗೋಳ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ರಂಗೇರಿದೆ. ವಿವಿಧ ನಾಯಕರು ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. 

‘ಮೈತ್ರಿ ಬಣದಲ್ಲಿ 20 ಅತೃಪ್ತ ಶಾಸಕರು : ಬಿಜೆಪಿಗೆ ಹೆಚ್ಚಲಿದೆ ಸಂಖ್ಯಾಬಲ’

ಕುಂದಗೋಳದ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಬಿಜೆಪಿ ಮುಖಂಡ ರೇಣುಕಾಚಾರ್ಯ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. 

ಡಿ.ಕೆ. ಶಿವಕುಮಾರ್ ಅಕ್ರಮ ಹಣದಿಂದ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಆದರೆ ಹಣದಿಂದ ಚುನಾವಣೆ ಗೆಲ್ಲುತ್ತೇವೆ ಎನ್ನುವುದು ಸಾಧ್ಯವಿಲ್ಲ. ಕುಂದಗೋಳ ಮತದಾರರು ದುಡ್ಡಿಗೆ ಮಣಿಯುವುದಿಲ್ಲ ಎಂದರು. 

ಶಿವಮೊಗ್ಗದಲ್ಲಿ ಡಿಕೆಶಿ ಆಟ ನಡೆಯಲ್ಲ. ಇಲ್ಲಿಗೆ ಬಂದು ಮೊಸಳೆ ಕಣ್ಣಿರು ಸುರಿಸುತ್ತಿದ್ದಾರೆ, ಮೇ 23 ರ ಯಡಿಯೂರಪ್ಪ ನೇತೃತ್ವದ ಸರ್ಕಾರ ಬರುವುದು ಖಚಿತ. ಮೈತ್ರಿ ಸರ್ಕಾರ ಉರುಳುವುದು ನಿಶ್ಚಿತ ಎಂದರು.