ನವ​ದೆ​ಹ​ಲಿ [ಜು.18]: ಉತ್ತ​ರಾ​ಖಂಡದ ಬಿಜೆಪಿ ಶಾಸಕ ಪ್ರಣವ್‌ ಸಿಂಗ್‌ ಚಾಂಪಿ​ಯ​ನ್‌​ನನ್ನು 6 ವರ್ಷದ ಕಾಲ ಬಿಜೆಪಿ ಪಕ್ಷ​ದಿಂದ ಉಚ್ಛಾ​ಟಿ​ಸ​ಲಾ​ಗಿದೆ.

ಇತ್ತೀ​ಚಿಗೆ ಮನೆ​ಯಲ್ಲಿ ನಡೆದ ಪಾರ್ಟಿ​ಯೊಂದರ ವೇಳೆ ಪಿಸ್ತೂಲು, ಬಂದೂ​ಕಿ​ನೊಂದಿಗೆ ಮದ್ಯ ಸೇವಿಸಿ ನೃತ್ಯ ಮಾಡಿದ್ದ ಬಿಜೆಪಿ ಶಾಸಕ ಪ್ರಣವ್‌ ಸಿಂಗ್‌ ಚಾಂಪಿ​ಯನ್‌ ಅವರ ವಿಡಿಯೋ ವೈರಲ್‌ ಆಗಿತ್ತು. 

ಅದಕ್ಕೂ ಮುನ್ನ ಸಾರ್ವ​ಜ​ನಿ​ಕ​ವಾಗಿ ದುರ್ನ​ಡತೆ ಪ್ರದ​ರ್ಶಿ​ಸಿದ ಹಿನ್ನೆ​ಲೆ​ಯಲ್ಲಿ ಅವರ ಮೇಲೆ ಪಕ್ಷದ ನಾಯ​ಕರು ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿದ್ದು. ಇದೀಗ ಅವ​ರನ್ನು ಪಕ್ಷ​ದಿಂದ 6 ವರ್ಷ ಕಾಲ ಉಚ್ಛಾ​ಟಿ​ಸುವ ಮೂಲಕ ಕಠಿಣ ಕ್ರಮಕ್ಕೆ ಮುಂದಾ​ಗಿ​ದ್ದಾರೆ ಎಂದು ಬಿಜೆಪಿ ವಕ್ತಾರ ಹಾಗೂ ರಾಜ್ಯ​ಸಭಾ ಸದಸ್ಯ ಅನಿಲ್‌ ಬಲೂನಿ ತಿಳಿಸಿದ್ದಾರೆ.