ತೆಲಂಗಾಣ ಸರ್ಕಾರಕ್ಕೆ ಬಿಜೆಪಿ 50 ಕೋಟಿ ಹಣವನ್ನು ಕೇಳಿದೆ. ಬಿಜೆಪಿ ಅಲ್ಪ ಸಂಖ್ಯಾತ ಆಯೋಗವು ಮುಂದಿನ ಮೊಹರಮ್ ಗಾಗಿ ಹಣದ ಬೇಡಿಕೆ ಇರಿಸಿದೆ. 

ಚಾರ್ ಮಿನಾರ್ : ಭಾರತೀಯ ಜನತಾ ಪಾರ್ಟಿ ಅಲ್ಪ ಸಂಖ್ಯಾತ ಆಯೋಗವು ಬುಧವಾರ ತೆಲಂಗಾಣ ಸರ್ಕಾರವು 50 ಕೋಟಿ ಹಣ ನೀಡುವಂತೆ ಕೋರಿದೆ. ಮುಂದಿನ ಮೊಹರಮ್ ತಯಾರಿಗಾಗಿ ಈ ಪ್ರಮಾಣದಲ್ಲಿ ಹಣವನ್ನು ನೀಡಬೇಕು ಎಂದು ಕೋರಿದೆ. 

ಬಿಜೆಪಿ ಅಲ್ಪ ಸಂಖ್ಯಾತ ಆಯೋಗದ ವಕ್ತಾರರಾದ ಮಿರ್ ಫಿರಾಸತ್ ಅಲಿ ಬಕ್ರಿ ಈ ಬಗ್ಗೆ ಮಾತನಾಡಿ ಮುಂದಿನ ಮೊಹಮರಂ ತಯಾರಿಗಾಗಿ ಒಂದು ತಿಂಗಳ ಮೊದಲು ಸಭೆ ನಡೆಸುವ ಮೂಲಕ ಚರ್ಚಿಸಲಾಗುತ್ತದೆ. ಆದರೆ ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದಿದ್ದಾರೆ. 

ಸದ್ಯ ತೆಲಂಗಾಣ ಮುಖ್ಯಮಂತ್ರಿ ಗೆ ಈ ಬಗ್ಗೆ ಬೇಡಿಕೆಯನ್ನು ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಅಧಿಕಾರಿಗಳಿಮದ ಸೂಕ್ತ ಪ್ರಕ್ರಿಯೆ ಬಂದಿಲ್ಲ ಎಂದಿದ್ದಾರೆ. ಆದರೆ ತೆಲಂಗಾಣ ವಕ್ಫ್ ಬೋರ್ಡ್ ಈ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತದೆ ಎನ್ನುವ ಭರವಸೆ ಇದೆ ಎಂದಿದ್ದಾರೆ.