ಬಿಜೆಪಿ ಮೂಲಗಳ ಪ್ರಕಾರ, ನಿನ್ನೆ ರಾತ್ರಿ ಬಿಜೆಪಿ ವರಿಷ್ಠರು ಬಿಎಸ್'ವೈ ಮತ್ತು ಈಶ್ವರಪ್ಪ ಇಬ್ಬರನ್ನೂ ಒಟ್ಟಿಗೆ ಕರೆಸಿ ಬುದ್ಧಿವಾದ ಹೇಳಿದರೆನ್ನಲಾಗಿದೆ. ಬಿಜೆಪಿಯಲ್ಲಿ ಯಾವ ರೀತಿಯಲ್ಲೂ ಒಡಕು ತೋರ್ಪಡಿಸಬಾರದೆಂದು ವರಿಷ್ಠರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದರಿಂದಾಗಿ ಇವರಿಬ್ಬರೂ ಬಹಿರಂಗವಾಗಿ ತಮ್ಮ ಮುನಿಸನ್ನು ತೋರಿಲ್ಲವೆನ್ನಲಾಗಿದೆ.

ಮೈಸೂರು(ಮೇ 07): ನಿನ್ನೆಯವರೆಗೂ ಪರಸ್ಪರ ಮುಖನೋಡದಷ್ಟು ಮುನಿಸು ತೋರ್ಪಡಿಸಿದ್ದ ಬಿಎಸ್ ಯಡಿಯೂರಪ್ಪ ಮತ್ತು ಕೆಎಸ್ ಈಶ್ವರಪ್ಪ ಇದೀಗ ಕೈಕೈ ಹಿಡಿದು ವೇದಿಕೆ ಏರಿದ ಅಪರೂಪದ ಘಟನೆಗೆ ಬಿಜೆಪಿ ಕಾರ್ಯಕಾರಿಣಿ ಸಭೆ ಸಾಕ್ಷಿಯಾಗಿದೆ. ಕಾರ್ಯಕಾರಿಣಿ ಸಭೆಯ ಎರಡನೇ ದಿನವಾದ ಇಂದು ಯಡಿಯೂರಪ್ಪನವರೇ ಖುದ್ದಾಗಿ ಈಶ್ವರಪ್ಪನವರ ಕೈಹಿಡಿದು ವೇದಿಕೆಗೆ ಕರೆದೊಯ್ದು ನೆರೆದಿದ್ದವರೆಲ್ಲರಿಗೂ ಅಚ್ಚರಿ ಮೂಡಿಸಿದರು. ವೇದಿಕೆ ಮೇಲೆ ಇಬ್ಬರೂ ಕೂಡ ಅಕ್ಕಪಕ್ಕದ ಆಸನಗಳಲ್ಲೇ ಆಸೀನರಾಗಿದ್ದು ಗಮನಾರ್ಹ. ನಿನ್ನೆ ಸಭೆಯ ಮೊದಲ ದಿನದಂದು ಈಶ್ವರಪ್ಪ ನಮಸ್ಕರಿಸಿದರೂ ದೃಷ್ಟಿ ಹಾಯಿಸದ ಯಡಿಯೂರಪ್ಪ ಇಂದು ಈ ಪರಿ ಬದಲಾವಣೆ ತೋರಲು ಏನು ಕಾರಣ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಜೆಪಿ ಮೂಲಗಳ ಪ್ರಕಾರ, ನಿನ್ನೆ ರಾತ್ರಿ ಬಿಜೆಪಿ ವರಿಷ್ಠರು ಬಿಎಸ್'ವೈ ಮತ್ತು ಈಶ್ವರಪ್ಪ ಇಬ್ಬರನ್ನೂ ಒಟ್ಟಿಗೆ ಕರೆಸಿ ಬುದ್ಧಿವಾದ ಹೇಳಿದರೆನ್ನಲಾಗಿದೆ. ಬಿಜೆಪಿಯಲ್ಲಿ ಯಾವ ರೀತಿಯಲ್ಲೂ ಒಡಕು ತೋರ್ಪಡಿಸಬಾರದೆಂದು ವರಿಷ್ಠರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದರಿಂದಾಗಿ ಇವರಿಬ್ಬರೂ ಬಹಿರಂಗವಾಗಿ ತಮ್ಮ ಮುನಿಸನ್ನು ತೋರಿಲ್ಲವೆನ್ನಲಾಗಿದೆ.

ಕಾರ್ಯಕಾರಿಣಿಯಲ್ಲಿ ಭಾಷಣ ಮಾಡಿದ ಕೆಎಸ್ ಈಶ್ವರಪ್ಪನವರು, ತಮ್ಮೆಲ್ಲರ ನಾಯಕ ಬಿಎಸ್'ವೈ ಅವರೇ ಮುಂದಿನ ಸಿಎಂ ಎಂಬ ಮಾತನ್ನು ಪುನರುಚ್ಚರಿಸಿದರು.