ತವರು ಜಿಲ್ಲೆಯಲ್ಲಿ ಸಿಎಂ ಮಣಿಸಲು ಬಿಜೆಪಿ ಮಾಸ್ಟರ್ ಪ್ಲಾನ್; ಯುಪಿಯಿಂದ ಆಗಮಿಸಿದೆ ಬಿಜೆಪಿ ಸಂಸದರ ತಂಡ

First Published 17, Mar 2018, 11:26 AM IST
BJP Master Plan against CM Siddaramaiah
Highlights

ತವರು ಜಿಲ್ಲೆಯಲ್ಲಿ ಸಿಎಂ ಮಣಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ನಡೆಸುತ್ತಿದೆ.  ಮೈಸೂರಿಗೆ ಯುಪಿ ಬಿಜೆಪಿ ಸಂಸದರ ತಂಡ ಆಗಮಿಸಿದೆ.  ಮೈಸೂರಿನಲ್ಲಿ ಇಂದಿನಿಂದ ಯುಪಿ ಸಂಸದರಿಂದ ಬಿಜೆಪಿ ಮುಖಂಡರ ಸಭೆ ನಡೆಯಲಿದೆ.  

ಮೈಸೂರು (ಮಾ. 17): ತವರು ಜಿಲ್ಲೆಯಲ್ಲಿ ಸಿಎಂ ಮಣಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ನಡೆಸುತ್ತಿದೆ.  ಮೈಸೂರಿಗೆ ಯುಪಿ ಬಿಜೆಪಿ ಸಂಸದರ ತಂಡ ಆಗಮಿಸಿದೆ.  ಮೈಸೂರಿನಲ್ಲಿ ಇಂದಿನಿಂದ ಯುಪಿ ಸಂಸದರಿಂದ ಬಿಜೆಪಿ ಮುಖಂಡರ ಸಭೆ ನಡೆಯಲಿದೆ.  

ಮೈಸೂರು ಭಾಗದಲ್ಲಿ ಈ ಬಾರಿ ಬಿಜೆಪಿ ಗೆಲ್ಲುವ ವಿಶ್ವಾಸವಿದೆ. ಸಿಎಂ ವಿರುದ್ದ ಅಭ್ಯರ್ಥಿ ಹಾಕುವ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ.  ಚುನಾವಣೆ ಗೆಲ್ಲಲು ಕರ್ನಾಟಕದಲ್ಲಿ ಯಾರೊಂದಿಗೂ ಒಪ್ಪಂದ ಮಾಡಕೊಳ್ಳುವುದಿಲ್ಲ. ಯುಪಿ ಉಪ ಚುನಾವಣೆಯಲ್ಲಿ ಬಿಜೆಪಿ ಅತಿಯಾದ ವಿಶ್ವಾಸದಿಂದ ಸೋಲಾಯಿತು ಎಂದು ಬಿಜೆಪಿ ಸಂಸದ ರಾಜೇಂದ್ರ ಅಗರ್’ವಾಲ್ ಹೇಳಿದ್ದಾರೆ.  

ನಾನು ನಾಲ್ಕು ಕ್ಷೇತ್ರಗಳ ಉಸ್ತುವಾರಿಯಾಗಿ ನಿಯೋಜನೆಗೊಂಡಿದ್ದೇನೆ. ಚಾಮುಂಡೇಶ್ವರಿ, ಕೃಷ್ಣರಾಜ, ನರಸಿಂಹರಾಜ, ಚಾಮರಾಜ ಕ್ಷೇತ್ರಗಳ ಚುನಾವಣಾ ಉಸ್ತುವಾರಿ ಕಾರ್ಯನಿರ್ವಹಿಸುತ್ತೇನೆ. ನಿನ್ನೆ 3 ಕ್ಷೇತ್ರಗಳಿಗೆ ಭೇಟಿ ನೀಡಿದ್ದೇನೆ, ಇಂದು 11 ಕ್ಕೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ. ಕಾರ್ಯಕರ್ತರು ಉತ್ಸಾಹದಲ್ಲಿದ್ದಾರೆ.  ಶೇ. 99 ರಷ್ಟು ಪಕ್ಷ ಸಂಘಟನೆ ಮಾಡಿದ್ದೇವೆ ಎಂದಿದ್ದಾರೆ. 

ತ್ರಿಪುರ ಫಲಿತಾಂಶ ಇಲ್ಲಿ ಮರುಕಳಿಸಲಿದೆ. ವಿಕಾಸ ಮುದ್ರೆಯಿಂದ ಚುನಾವಣಾ ಎದುರಿಸುತ್ತೇವೆ, ವಿಕಾಸ್ ನಮ್ಮ ಅಜೆಂಡಾ. ಬಡವರ ವಿಕಾಸ ಆಗಬೇಕು ಎಂಬುದು ಕೇಂದ್ರ ಸರ್ಕಾರದ ಉದ್ದೇಶ. ಓಟ್ ಬ್ಯಾಂಕ್ ರಾಜಕೀಯ ಮಾಡಲ್ಲ. ರಾಜ್ಯದ ಸರ್ಕಾರ ಭ್ರಷ್ಟಾಚಾರ ಕಾನೂನು ಹದಗೆಟ್ಟಿರುವುದಲ್ಲಿ ಖ್ಯಾತ ಹೊಂದಿದೆ. ಮುಂದಿನ ದಿನಗಳಲ್ಲಿ ಇದರಿಂದ ರಾಜ್ಯ ಮುಕ್ತಾಯವಾಗಲಿದೆ ಎಂದಿದ್ದಾರೆ. 
 

loader