Asianet Suvarna News Asianet Suvarna News

ಡಿವೈಎಸ್ಪಿ  ಗಣಪತಿ ಪ್ರಕರಣ: ಜಾರ್ಜ್ ವಿರುದ್ಧ ಹೋರಾಟ ಕೈಬಿಟ್ಟ ಬಿಜೆಪಿ

ಡಿವೈಎಸ್ಪಿ  ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಚಿವ ಜಾರ್ಜ್ ರಾಜೀನಾಮೆ ನೀಡುವವರೆಗೂ ಅಹೋರಾತ್ರಿ ಹೋರಾಟ ಮಾಡುವುದಾಗಿ ಘೋಷಣೆ ಮಾಡಿದರು. ಆದರೆ ಈಗ ಬಿಜೆಪಿಯು ಸಚಿವ ಜಾರ್ಜ್ ವಿರುದ್ಧ ಹೋರಾಟ ಕೈಬಿಟ್ಟಂತೆ ಕಾಣಿಸುತ್ತದೆ.  

BJP leave the protest agaist George

ಬೆಂಗಳೂರು (ಸೆ.26): ಡಿವೈಎಸ್ಪಿ  ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಚಿವ ಜಾರ್ಜ್ ರಾಜೀನಾಮೆ ನೀಡುವವರೆಗೂ ಅಹೋರಾತ್ರಿ ಹೋರಾಟ ಮಾಡುವುದಾಗಿ ಘೋಷಣೆ ಮಾಡಿದರು. ಆದರೆ ಈಗ ಬಿಜೆಪಿಯು ಸಚಿವ ಜಾರ್ಜ್ ವಿರುದ್ಧ ಹೋರಾಟ ಕೈಬಿಟ್ಟಂತೆ ಕಾಣಿಸುತ್ತದೆ.  

ಹೋರಾಟ ಮಾಡಿಯೇ ತೀರುತ್ತೇವೆ ಅಂತ ಘೋಷಣೆ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ  ಯಡಿಯೂರಪ್ಪ ಸೇರಿದಂತೆ ನಾಯಕರೆಲ್ಲಾ ದೆಹಲಿಗೆ ತೆರಳಿದ್ದರು. ಯಡಿಯೂರಪ್ಪ ಪ್ರತಿಭಟನೆಗೆ ವ್ಯವಸ್ಥೆ ಯಾರು ಮಾಡಬೇಕು ಎಂಬ ಜವಾಬ್ದಾರಿಯೇ ಹಂಚಿಕೆ ಮಾಡಿರಲಿಲ್ಲ.  ಎಷ್ಟು ದಿನದವರೆಗೆ ಪ್ರತಿಭಟನೆ ನಡೆಸಬೇಕು?. ಒಂದು ವೇಳೆ ಸಿಬಿಐ ತನಿಖೆ ಅರಂಭವಾಗುವುದು ತಡವಾದಲ್ಲಿ ಏನು ಮಾಡುವುದು? ಎಂಬ ಯಾವ ವಿಚಾರವೂ ನಾಯಕರು ಚರ್ಚೆ ನಡೆಸಲಿಲ್ಲ. ಅಷ್ಟೇ ಅಲ್ಲದೆ ನಿನ್ನೆ ಸಂಜೆಯವರೆಗೂ ಬೆಂಗಳೂರು ನಗರ  ಬಿಜೆಪಿ ಘಟಕಕ್ಕೆ ಪ್ರತಿಭಟನೆಯ ವಿಚಾರವೇ ಗೊತ್ತಿರಲಿಲ್ಲ . ಅಹೋರಾತ್ರಿ ಪ್ರತಿಭಟನೆಯ ಪೂರ್ವ ಸಿದ್ದತಾ ಸಭೆ ಕೂಡ ಈವರೆಗೂ ನಡೆದಿಲ್ಲ. ಈ ಎಲ್ಲಾ ಬೆಳವಣಿಗೆ ನೋಡಿದರೆ ಬಿಜೆಪಿ ಗಣಪತಿ ಆತ್ಮಹತ್ಯೆ ಪ್ರಕರಣ ಮೆರೆತುಬಿಟ್ಟಿದ್ದಾರಾ ಎಂಬ ಅನುಮಾನ ಶುರುವಾಗಿದೆ.

Follow Us:
Download App:
  • android
  • ios