ಬೆಂಗಳೂರು : ಸದ್ಯ ರಾಜ್ಯ ರಾಜಕಾರಣದಲ್ಲಿ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಪ್ಲಾನ್ ಮಾಡುತ್ತಿದೆ. ಆದರೆ ಬಿಜೆಪಿ ಸೆಳೆದುಕೊಳ್ಳಲು ಯತ್ನಿಸಿದ್ದ ರಮೇಶ್ ಜಾರಕಿಹೊಳಿ ಅವರು ಕೊನೆ ಕ್ಷಣದಲ್ಲಿ ಜಾರಿಕೊಳ್ಳುವ ಸಾಧ್ಯತೆ ಇದೆ. 

ಆದರೆ ಮೊದಲಿಗೆ ಬಿಜೆಪಿ  13 ಜನ ಶಾಸಕರ ಆಪರೇಷನ್ ಗೆ ಮಾಸ್ಟರ್ ಪ್ಲಾನ್ ಮಾಡಿದೆ.  13 ಜನ ಶಾಸಕರ ರಾಜೀನಾಮೆ ಕೊಡಿಸಿದರೂ ಕೂಡ ಬಿಜೆಪಿ ಸರ್ಕಾರ ರಚಿಸಬಹುದಾಗಿದ್ದು, ಅಲ್ಲದೇ ಓರ್ವ ಪಕ್ಷೇತರರನ್ನು ಸೆಳೆಯಲು ಪ್ಲಾನ್ ಮಾಡಿದೆ.  ಪಕ್ಷೇತರ ಶಾಸಕ ನಾಗೇಶ ಅವರನ್ನು ಸೆಳೆಯಲು ಬಿಜೆಪಿ ನಿರ್ಧಾರ ಮಾಡಿದೆ. 

"

ಪಕ್ಷೇತರ ಶಾಸಕನ ಒಂದು ಮತದಿಂದ ಬಿಜೆಪಿ ಸಂಖ್ಯಾಬಲ 105ಕ್ಕೆ ಏರಲಿದೆ. 209 ವಿಧಾನ ಸಭೆ ಸಂಖ್ಯಾ ಬಲವಾದರೇ 105 ಬಹುಮತ ಸಾಬೀತು ಪಡಿಸಲು ಇರುವ ಮ್ಯಾಜಿಕ್ ನಂಬರ್ ಆಗಿರಲಿದೆ.  ಪಕ್ಷೇತರ ಶಾಸಕನ ಬೆಂಬಲ ಪಡೆದು ಈ ಬಹುಮತವನ್ನ ಬಿಜೆಪಿ ಸಾಬೀತುಪಡಿಸಬಹುದಾಗಿದೆ. 

13 ಶಾಸಕರಲ್ಲಿ ಕನಿಷ್ಠ 10 ಕ್ಷೇತ್ರಗಳಲ್ಲಿ ಮರಳಿ ಗೆಲ್ಲುವಂತ ಶಾಸಕರ ಆಯ್ಕೆಗೆ ಮುಂದಾಗಿದೆ. 

ಯಲ್ಲಾಪುರ - ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬರ್. 
ಹಿರೇಕೆರೂರು : ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್.
ದಾವಣಗೇರೆ : ಕಾಂಗ್ರೆಸ್ ಶಾಸಕ ಶ್ಯಾಮನೂರು ಶಿವಶಂಕರಪ್ಪ
ಭದ್ರಾವತಿ : ಕಾಂಗ್ರೆಸ್ ಶಾಸಕ ಬಿ.ಕೆ ಸಂಗಮೇಶ್ವರ್
ಅಫ್ಲಜಲ್ ಪುರ : ಕಾಂಗ್ರೆಸ್ ಶಾಸಕ ಎಂ.ವೈ ಪಾಟೀಲ್
ವಿಜಯಪುರ : ಕಾಂಗ್ರೆಸ್ ಶಾಸಕ ಆನಂದ್ ಸಿಂಗ್
ಬಳ್ಳಾರಿ ಗ್ರಾಮೀಣ :  ಕಾಂಗ್ರೆಸ್ ಶಾಸಕ ಬಿ. ನಾಗೇಂದ್ರ, 
ಮಸ್ಕಿ : ಕಾಂಗ್ರೆಸ್ ಶಾಸಕ ಪ್ರತಾಪ್ ಗೌಡ ಪಾಟೀಲ್
ಕಂಪ್ಲಿ : ಕಾಂಗ್ರೆಸ್ ಶಾಸಕ ಗಣೇಶ್