ಪ್ರಭಾಕರ್ ಗೌರಿ ಲಂಕೇಶ್ ಹತ್ಯೆ ಆರೋಪಿಗಳ  ರೇಖಾಚಿತ್ರದಲ್ಲಿ ತಿಲಕ ಇಟ್ಟಿರುವ ವ್ಯಕ್ತಿ ಹಾಗೂ ಹಾಗೂ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ ಗೌಡರ ಆಪ್ತ ಸಹಾಯಕ ಪ್ರಭಾಕರ್ ಭಾವಚಿತ್ರಕ್ಕೂ ಸಾಮ್ಯತೆ ಕಾಣುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಭಾರೀ ಚರ್ಚೆಯಾಗುತ್ತಿದೆ.

ತುಮಕೂರು(ಅ.16): ಪ್ರಭಾಕರ್ ಗೌರಿ ಲಂಕೇಶ್ ಹತ್ಯೆ ಆರೋಪಿಗಳ ರೇಖಾಚಿತ್ರದಲ್ಲಿ ತಿಲಕ ಇಟ್ಟಿರುವ ವ್ಯಕ್ತಿ ಹಾಗೂ ಹಾಗೂ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ ಗೌಡರ ಆಪ್ತ ಸಹಾಯಕ ಪ್ರಭಾಕರ್ ಭಾವಚಿತ್ರಕ್ಕೂ ಸಾಮ್ಯತೆ ಕಾಣುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಭಾರೀ ಚರ್ಚೆಯಾಗುತ್ತಿದೆ.

ಈ ಎರಡೂ ಚಿತ್ರಗಳಿಗೆ ಹೋಲಿಕಾಯಗುತ್ತಿದ್ದಂತೆ ಪ್ರಭಾಕರ್'​​​​​​ಗೆ ಒಂದೇ ಸಮನೆ ಫೋನ್ ಕಾಲ್ ಬರುತ್ತಿವೆ. ಗೌರಿ ಹಂತಕರ ರೇಖಾ ಚಿತ್ರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರಭಾಕರ್ ತಮ್ಮ ಫೇಸ್'​​ಬುಕ್'​​​​​ನಲ್ಲಿ ಬರೆದುಕೊಂಡಿದ್ದಾರೆ. ಪ್ರಭಾಕರ್ ಕೂಡಾ ತಮ್ಮ ಹಣೆಗೆ ಕುಂಕುಮದ ತಿಲಕ ಇಟ್ಟುಕೊಳ್ಳುತ್ತಾರೆ. ಹಾಗಾಗಿ ಸಾಮ್ಯತೆ ಕಾಣುತ್ತಿದೆ.