Asianet Suvarna News Asianet Suvarna News

ಸೋನಿಯಾ ಗಾಂಧಿ ಭೇಟಿ ಮಾಡಿದ ಪ್ರಹ್ಲಾದ್ ಜೋಷಿ: ಕಾರಣವೇನು?

ಸೋನಿಯಾ ಗಾಂಧಿ ಭೇಟಿ ಮಾಡಿದ ಪ್ರಹ್ಲಾದ್ ಜೋಷಿ ನೇತೃತ್ವದ ಬಿಜೆಪಿ ನಿಯೋಗ| ಜೂ.17ರಿಂದ ಆರಂಭವಾಗಲಿರುವ ಸಂಸತ್ ಅಧಿವೇಶನ| ಸುಗಮ ಕಾರ್ಯಕಲಾಪಕ್ಕೆ ಸಹಕಾರ ಕೋರಿದ ಬಿಜೆಪಿ ಸಂಸದರು|  10 ಜನಪಥ್ ನಿವಾಸದಲ್ಲಿ ಸೋನಿಯಾ ಗಾಂಧಿ ಭೇಟಿ ಮಾಡಿದ ಬಿಜೆಪಿ ನಿಯೋಗ| ಜೂ.16 ರಂದು ಸಂಸತ್ತಿನಲ್ಲಿ ಕೇಂದ್ರ ಸರ್ಕಾರದಿಂದ ಸರ್ವ ಪಕ್ಷಗಳ ಸಭೆ|

BJP Leaders Meet Sonia Gandhi To Seek Cooperation For Session
Author
Bengaluru, First Published Jun 7, 2019, 4:57 PM IST

ನವದೆಹಲಿ(ಜೂ.07): ಜೂ.17ರಿಂದ ಆರಂಭವಾಗಲಿರುವ ಸಂಸತ್ ಅಧಿವೇಶನಕ್ಕೂ ಮುನ್ನ, ಸುಗಮ ಕಾರ್ಯಕಲಾಪಕ್ಕೆ ಸಹಕಾರ ಕೋರಲು ಬಿಜೆಪಿ ಸಂಸದರ ನಿಯೋಗ ಕಾಂಗ್ರೆಸ್ ಸಂಸದೀಯ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದೆ.

ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ನೇತೃತ್ವದ ನಿಯೋಗದಲ್ಲಿ, ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವ ನರೇಂದ್ರ ಸಿಂಗ್ ತೋಮರ್, ರಾಜ್ಯ ಸಚಿವ ಅರ್ಜುನ್ ರಾಮ್ ಮೇಘ್‌ವಾಲ್ ಇದ್ದರು.

ನವದೆಹಲಿಯಲ್ಲಿರುವ 10 ಜನಪಥ್ ನಿವಾಸದಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ಬಿಜೆಪಿ ನಿಯೋಗ, ಸುಗಮ ಕಾರ್ಯಕಲಾಪಕ್ಕೆ ಪ್ರತಿಪಕ್ಷ ಕಾಂಗ್ರೆಸ್ ನ ಸಹಕಾರ ಕೋರಿದರು.

ಸೋನಿಯಾ ಗಾಂಧಿ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತೋಮರ್, ಸುಗಮ ಕಾರ್ಯಕಲಾಪ ಹಿನ್ನೆಲೆಯಲ್ಲಿ ಸಹಕಾರ ಕೋರಿ ಪ್ರತಿ ಪಕ್ಷಗಳ ಎಲ್ಲಾ ನಾಯಕರೊಂದಿಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಇನ್ನು ಅಧಿವೇಶನಕ್ಕೂ ಮುನ್ನಾ ದಿನ ಅಂದರೆ ಜೂ.16 ರಂದು ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಸರ್ವ ಪಕ್ಷಗಳ ಸಭೆ ನಡೆಸಲಿದ್ದು, ಮೊದಲ ಸಂಸತ್ ಅಧಿವೇಶನಕ್ಕೆ ಸಹಕಾರ ಕೋರಲಿದೆ.

Follow Us:
Download App:
  • android
  • ios