ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಬಿಜೆಪಿ ನಾಯಕರಿಂದಲೇ ವಿರೋಧ; ಹೇಳಿಕೆ ವಾಪಸ್ ಪಡೆಯಲು ಸುರೇಶ್ ಕುಮಾರ್ ಆಗ್ರಹ

First Published 18, Feb 2018, 12:01 PM IST
BJP Leaders Condemns Ananth Kumar hegade Statement
Highlights

ಕನ್ನಡದ ಬಗ್ಗೆ ಅನಂತಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ಬಿಜೆಪಿ ನಾಯಕರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ.  ಅನಂತಕುಮಾರ್ ಹೆಗಡೆ ಹೇಳಿಕೆಯನ್ನು ಶಾಸಕ ಸುರೇಶ್​ ಕುಮಾರ್​  ಖಂಡಿಸಿದ್ದಾರೆ.

ಬೆಂಗಳೂರು (ಫೆ.17): ಕನ್ನಡದ ಬಗ್ಗೆ ಅನಂತಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ಬಿಜೆಪಿ ನಾಯಕರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ.  ಅನಂತಕುಮಾರ್ ಹೆಗಡೆ ಹೇಳಿಕೆಯನ್ನು ಶಾಸಕ ಸುರೇಶ್​ ಕುಮಾರ್​
 ಖಂಡಿಸಿದ್ದಾರೆ.

ಅನಂತಕುಮಾರ್ ಹೆಗಡೆ ಹೇಳಿಕೆಯನ್ನು ನಾನು ವಿರೋಧಿಸುತ್ತೇನೆ. ಇಂತಹ ಹೇಳಿಕೆ ಒಪ್ಪುವಂತಹ ಮಾತಲ್ಲ. ಕೆಲವೇ ಪ್ರದೇಶಗಳ ಕನ್ನಡ ಉತ್ತಮ, ತರ್ಜುಮೆಗೆ ಯೋಗ್ಯ ಎಂದಿದ್ದಾರೆ. ಬೇರೆ ಕನ್ನಡ ತರ್ಜುಮೆಗೆ ಯೋಗ್ಯ ಅಲ್ಲ ಅಂತ ಹೀಯಾಳಿಸುವ ಹೇಳಿಕೆ ನೀಡಿದ್ದಾರೆ ಎಂದು ಸುರೇಶ್​ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ನಾನೊಬ್ಬ ಬೆಂಗಳೂರಿಗ, ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವನು. ನಾನು ಮಾತನಾಡುವ ಕನ್ನಡದ ಬಗ್ಗೆ ನನಗೆ ವಿಶ್ವಾಸವಿದೆ. ಚಾಮರಾಜನಗರದಿಂದ ಬೀದರ್’​ವರೆಗೂ ಕನ್ನಡದ ಸ್ವರೂಪ ಬದಲಾಗುತ್ತದೆ. ಪ್ರತಿಯೊಂದು ಪ್ರದೇಶದ ಕನ್ನಡಕ್ಕೂ ಅದರದ್ದೇ ಆದ ಸೊಗಡು ಇದೆ. ಹೀಗಿರುವಾಗ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮಾತು ಸರಿಯಲ್ಲ ಎಂದಿದ್ದಾರೆ. 
ಹೆಗಡೆ ಅವರ ಹೇಳಿಕೆಯಿಂದ ಬಹಳಷ್ಟು ಮಂದಿಗೆ ನೋವು, ಬೇಸರ, ಅಸಮಾಧಾನವಾಗಿದೆ. ಕೇಂದ್ರ ಸಚಿವರಾಗಿ ಹೆಚ್ಚು ಎಚ್ಚರಿಕೆಯಿಂದ ಮಾತನಾಡಬೇಕು. ಅನಂತಕುಮಾರ್ ಹೆಗಡೆ ತಮ್ಮ ಹೇಳಿಕೆಯನ್ನು ವಾಪಸ್​ ಪಡೆಯಬೇಕು ಎಂದು
ಬಿಜೆಪಿ ಹಿರಿಯ ನಾಯಕ ಸುರೇಶ್​ ಕುಮಾರ್ ಆಗ್ರಹಿಸಿದ್ದಾರೆ.  
 

loader