ಬೆಂಗಳೂರು (ಅ.30): ಈ ಬಾರಿಯ ದೀಪಾವಳಿಯನ್ನು ಬಿಜೆಪಿ ನಾಯಕರು ಯಲಹಂಕದ ಬಿಎಸ್ಎಫ್ ತರಬೇತಿ ಶಾಲೆಯಲ್ಲಿ ಆಚರಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ  ಅನಂತಕುಮಾರ್ ಹಾಗೂ ಸದಾನಂದಗೌಡ, ಆರ್.ಅಶೋಕ್ ಸೇರಿದಂತೆ ಹಲವು ನಾಯಕರು ಆಚರಣೆಯಲ್ಲಿ ಭಾಗಿಯಾಗಿದ್ದರು.

ಬಿಜೆಪಿ ನಾಯಕರು ಬಿಎಸ್ಎಫ್ ತರಬೇತಿ ಶಾಲೆಗೆ ತೆರಳಿ ಸೈನಿಕರಿಗೆ ಸಿಹಿ ಹಂಚಿ ಶುಭಾಶಯ ತಿಳಿಸಿದರು.

ಸೇನೆಯೊಂದಿಗೆ ನಾಗರಿಕರು ಸೇರಿ ದೀಪಾವಳಿ ಆಚರಿಸಬೇಕು; ಅವರ ಸಮಸ್ಯೆ ಕೇಳಬೇಕು; ಅವರ ನಿರಂತರ ಸಂಪರ್ಕದಲ್ಲಿರಬೇಕು; ಸೈನಿಕರು ಸ್ಥೈರ್ಯ ಕಳೆದುಕೊಂಡರೆ, ಯುದ್ಧ ಗೆಲ್ಲೋದು ಕಷ್ಟ, ಅದಕ್ಕೆ ಸೈನಿಕರ ಕುಟುಂಬವನ್ನು ನಾಗರಿಕರು ನೋಡಿಕೊಳ್ಳಬೇಕು ಹಾಗೂ ಪ್ರತಿಯೊಂದು ಕುಟುಂಬದಿಂದ ಒಬ್ಬನಾದರೂ ಸೈನಿಕನಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.

ಈ ಬಾರಿ ದೀಪಾವಳಿಯನ್ನು ಸೈನಿಕರೊಂದಿಗೆ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿದ್ದರು.