ರಾತ್ರೋರಾತ್ರಿ ಸಿಎಂ ಆದ ಕುಮಾರಸ್ವಾಮಿ'ಗೆ ಅದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಇಪ್ಪತ್ತು ಸಾವಿರ ಕೋಟಿ ಬೇನಾಮಿ ಆಸ್ತಿ ಹೊಂದಿದ್ದಾರೆ ಅಂತ ದೂರು ಕೊಟ್ಟಿರೋದು ಕಡಿಮೆಯಾಯ್ತು ಅಂತ ನೋವೇ? ಅಥವಾ 20 ಸಾವಿರ ಕೋಟಿ ಹೆಚ್ಚಾಯ್ತು ಅಂತ ಬೇಸರವೇ? ನೀವೇ ಹೇಳಿ‌ ನಿಮ್ಮ ಆಸ್ತಿ ಎಷ್ಟು ಎಂದು? ಕುಮಾರಸ್ವಾಮಿ ಯಾಕೆ ವಿಚಲಿತರಾಗಿದ್ದೀರಿ? ಎಂದು ಪ್ರಶ್ನಿಸಿದರು.

ಬೆಂಗಳೂರು(ಮೇ.24): ಕುಮಾರಸ್ವಾಮಿ'ಗೆ 'ಐಯಾಮ್ ದಿ ಬೆಸ್ಟ್' ಎಂಬ ಆತ್ಮರತಿ ರೋಗ ಅಂಟಿಕೊಂಡಿದೆ. ಅವರಿಗೆ ತಾವು ಸಿಎಂ ಆಗಿದ್ದ ಅವಧಿಯ ಗುಂಗಿನಿಂದ ಹೊರಬರಲಾಗುತ್ತಿಲ್ಲ ಎಂದು ಬಿಜೆಪಿ ನಾಯಕಿ ತೇಜಸ್ವಿನಿ ಗೌಡ ಆರೋಪಿಸಿದ್ದಾರೆ.

ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿ'ಗಾರರೊಂದಿಗೆ ಮಾತನಾಡಿದ ಅವರು' ರಾತ್ರೋರಾತ್ರಿ ಸಿಎಂ ಆದ ಕುಮಾರಸ್ವಾಮಿ'ಗೆ ಅದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಇಪ್ಪತ್ತು ಸಾವಿರ ಕೋಟಿ ಬೇನಾಮಿ ಆಸ್ತಿ ಹೊಂದಿದ್ದಾರೆ ಅಂತ ದೂರು ಕೊಟ್ಟಿರೋದು ಕಡಿಮೆಯಾಯ್ತು ಅಂತ ನೋವೇ? ಅಥವಾ 20 ಸಾವಿರ ಕೋಟಿ ಹೆಚ್ಚಾಯ್ತು ಅಂತ ಬೇಸರವೇ? ನೀವೇ ಹೇಳಿ‌ ನಿಮ್ಮ ಆಸ್ತಿ ಎಷ್ಟು ಎಂದು? ಕುಮಾರಸ್ವಾಮಿ ಯಾಕೆ ವಿಚಲಿತರಾಗಿದ್ದೀರಿ? ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ತಾನು ಸಿಎಂ ಆಗಿದ್ದಾಗ ವೈಭವೀಪಿತ ಆಡಳಿತ ನೀಡಿದ ಭ್ರಮೆಯಲ್ಲಿದ್ದಾರೆ. ಯಡಿಯೂರಪ್ಪ ನವರನ್ನು ನೀವು ಆದರ್ಶವಾಗಿಟ್ಟುಕೊಳ್ಳದಿದ್ದರೂ ಸರಿ ಕನಿಷ್ಠ ಪಕ್ಷ ದೇವೇಗೌಡರ ಆದರ್ಶ ಅನುಸರಿಸಿ.ಕುಮಾರಸ್ವಾಮಿ'ಗೆ ದೇವೇಗೌಡರು ಬುದ್ಧಿ ಹೇಳಲಿ. ಕುಮಾರಸ್ವಾಮಿ ಹಾಗೂ ದೇವೇಗೌಡರು ನಾವೆಂದಿಗೂ ಕಾಂಗ್ರೆಸ್ ಜತೆ ಕೈ ಜೋಡಿಸಲ್ಲ ಅಂತ ಹೇಳಲಿ' ಎಂದು ಜೆಡಿಎಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.

20 ಸಾವಿರ ಕೋಟಿ ರೂಪಾಯಿ ಬೇನಾಮಿ ಆಸ್ತಿಯನ್ನು ಕುಮಾರಸ್ವಾಮಿ ಕುಟುಂಬ ಹೊಂದಿದ್ದಾರೆ ಎಂದು ನಾಗರಿಕರೊಬ್ಬರು ದೂರು ನೀಡಿದ್ದಾರೆ. ವೆಂಕಟೇಶಗೌಡ ಎಂಬಾತ ದೂರು ಕೊಟ್ಟಿದ್ದು, ಅವರು ಬಿಜೆಪಿಯವರು ಅಂತ ಕುಮಾರಸ್ವಾಮಿ ಆರೋಪಿಸಿದ್ದಾರೆ. ಆದರೆ ವೆಂಕಟೇಶ ಗೌಡ ಎಂಬುವವರು ಬಿಜೆಪಿ ಯಲ್ಲಿ ಇಲ್ಲ. ದೂರು ಕೊಟ್ಟಿರುವವರು ಬಿಜೆಪಿಯವರಲ್ಲ' ಸ್ಪಷ್ಟಪಡಿಸಿದರು.

ಕುಮಾರಸ್ವಾಮಿ ತಮ್ಮನ್ನು ತಾವು ಬಾಹುಬಲಿ ಅಂತ ಭಾವಿಸಿದಂತಿದೆ. ಕುಮಾರಸ್ವಾಮಿ ಬಾಹುಬಲಿಯೂ ಅಲ್ಲ, ಬಲ್ಲಾಳದೇವನೂ ಅಲ್ಲ, ಕುಮಾರಸ್ವಾಮಿ ಕಟ್ಟಪ್ಪ.ಕುಮಾರಸ್ವಾಮಿ ಭ್ರಮೆಯಿಂದ ಹೊರಗೆ ಬರಲಿ. ಕುಮಾರಸ್ವಾಮಿ ಹಿಟ್ ಆಂಡ್ ರನ್'ಗೆ ಫೇಮಸ್. ಈಗಲೂ ಅದನ್ನೇ ಮಾಡ್ತಿದ್ದಾರೆ' ಎಂದು ತೇಜಸ್ವಿನಿ ಗೌಡ ಆರೋಪಿಸಿದರು.