ದೇವೇಗೌಡರಿಗೆ, ಬಿಎಸ್ ವೈ ಗೆ ಥ್ಯಾಂಕ್ಯೂ ಹೇಳಿದ್ದಾರೆ. ಹಾಗಾಗಿ ಬಿಜೆಪಿಯಿಂದಲೂ ನಾವು ಅವರಿಗೆ ಥ್ಯಾಂಕ್ಯೂ ಹೇಳ್ತಿದ್ದೀವಿ'

ಬೆಂಗಳೂರು(ಆ.07): ಇಂಧನ ಸಚಿವ ಡಿ.ಕೆ. ಶಿವಕುಮಾರ್ ಬಿಜೆಪಿ ಸೇರಲು ಕೇಂದ್ರ ಸಚಿವರೊಬ್ಬರು ಆಹ್ವಾನಿಸಿದ್ದು ಅದನ್ನು ನಿರಾಕರಿಸಿದ್ದಕ್ಕೆ ಅವರ ಮೇಲೆ ಐಟಿ ದಾಳಿ ನಡೆಯಿತೆ ? ಈ ಬಗ್ಗೆ ಸುದ್ದಿಗಾರರು ಬಿಜೆಪಿ ವಕ್ತಾರ ಸುರೇಶ್ ಕುಮಾರ್ ಅವರನ್ನು ಪ್ರಶ್ನಿಸಿದಾಗ ' ಮುಂಗಾರು ನಿಧಾನ ಆಗುವುದಕ್ಕೂ ಬಿಜೆಪಿ ಕಾರಣ ಎಂದು ಕಾಂಗ್ರೆಸ್'ನವರು ಆರೋಪಿಸಲಿಲ್ಲವಲ್ಲ' ಎಂದು ಉತ್ತರ ಕೊಟ್ಟರು

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಡಿಕೆಶಿ ಐಟಿ ದಾಳಿ ಬಗ್ಗೆ ಬಿಜೆಪಿ ಸಾಫ್ಟು ಇಲ್ಲ, ಹಾರ್ಡು ಇಲ್ಲ. ಸೂಕ್ಷ್ಮವಾಗಿ ನಮ್ಮ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಅವರು ದೇವೇಗೌಡರಿಗೆ, ಬಿಎಸ್ ವೈ ಗೆ ಥ್ಯಾಂಕ್ಯೂ ಹೇಳಿದ್ದಾರೆ. ಹಾಗಾಗಿ ಬಿಜೆಪಿಯಿಂದಲೂ ನಾವು ಅವರಿಗೆ ಥ್ಯಾಂಕ್ಯೂ ಹೇಳ್ತಿದ್ದೀವಿ' ಎಂದು ತಿಳಿಸಿದರು.

ಡಿಕೆಶಿ ವಿಷಯವಾಗಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ,ಆರೋಪ ಮುಕ್ತರಾಗುವರೆಗೂ ಡಿ.ಕೆ. ಶಿವಕುಮಾರ್ ಸಚಿವ ಸ್ಥಾನದಲ್ಲಿ ಮುಂದುವರೆಯಬಾರದು. ಕೂಡಲೇ ರಾಜೀನಾಮೆ ನೀಡಬೇಕು.ಪ್ರತ್ಯೇಕ ಲಿಂಗಾಯತ ಮಹಾಸಭಾ ವಿಚಾರ.ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲ.ಸಮುದಾಯದ ಎಲ್ಲರೂ ಒಂದೆಡೆ ಕುಳಿತು ಅಂತಿಮ‌ ತೀರ್ಮಾನ ತೆಗೆದುಕೊಳ್ಳಬೇಕು.ಯಾರೂ ಕೂಡ ಸಮುದಾಯಕ್ಕೆ ಧಕ್ಕೆಯಾಗುವಂತೆ ನಡೆದುಕೊಳ್ಳಬಾರದು.ಎಲ್ಲಾ ಮಠಾಧೀಶರ ಜೊತೆ ಈ ಬಗ್ಗೆ ಮೊದಲು ಮುಕ್ತ ಚರ್ಚೆ ನಡೆಯಬೇಕು.ಈ ನಿಟ್ಟಿನಲ್ಲಿ ನಾನೂ ಹಾಗೂ ಸೋಮಣ್ಣ ಮಠಾಧೀಶರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇವೆ. ಇಷ್ಟು ದಿನ ಇಲ್ಲದ ವಿವಾದ ಚುನಾವಣೆ ಸಮಯದಲ್ಲಿ ಯಾಕೆ? ಕಾಂಗ್ರೆಸ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ' ಎಂದು ಆಡಳಿತ ಪಕ್ಷದ ಬಗ್ಗೆ ಕಿಡಿ ಕಾರಿದರು.