ಪ್ರಿಯಾಂಕ ಗಾಂಧಿ ಅಷ್ಟೇನು ಸುಂದರ ಮಹಿಳೆ ಅಲ್ಲ , ಪ್ರಿಯಾಂಕ ಗಾಂಧಿಗಿಂತ ಅನೇಕರು ಸುಂದರಿಯರಿದ್ದಾರೆ  ಎಂದು ಬಿಜೆಪಿ ಸಂಸದ ವಿನಯ್ ಕಟಿಯಾರ್ ಹೇಳಿದ್ದಾರೆ. 

ಲಕ್ನೋ (ಜ.25): ಮುಂದಿನ ತಿಂಗಳು ಚುನಾವಣೆಗೆ ತಯಾರಾಗುತ್ತಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ನಾಯಕ, ಪ್ರಿಯಾಂಕ ಗಾಂಧಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪ್ರಿಯಾಂಕ ಗಾಂಧಿ ಅಷ್ಟೇನು ಸುಂದರ ಮಹಿಳೆ ಅಲ್ಲ , ಪ್ರಿಯಾಂಕ ಗಾಂಧಿಗಿಂತ ಅನೇಕರು ಸುಂದರಿಯರಿದ್ದಾರೆ ಎಂದು ಬಿಜೆಪಿ ಸಂಸದ ವಿನಯ್ ಕಟಿಯಾರ್ ಹೇಳಿದ್ದಾರೆ. 

ಬಿಜೆಪಿಯಲ್ಲಿ ಸಾಕಷ್ಟು ಮಹಿಳಾ ಸ್ಟಾರ್​ ಪ್ರಚಾರಕರಿದ್ದಾರೆ, ಬಿಜೆಪಿ ನಾಯಕಿ ಸ್ಮೃತಿ ಇರಾನಿ ಬಂದರೆ ಭಾರಿ ಜನ ಸೇರುತ್ತಾರೆ ಎಂದು 90ರ ದಶಕದಲ್ಲಿ ರಾಮ ಜನ್ಮಭೂಮಿ ಚಳುವಳಿಯ ನೇತೃತ್ವ ವಹಿಸಿದ್ದ ಕಟಿಯಾರ್ ಹೇಳಿದ್ದಾರೆ.