ಯಾದಗಿರಿ [ಜೂ.27] : ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮೋದಿ ಕನಸಿನಲ್ಲೂ ಕಾಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.

ಯಾದಗಿರಿಯಲ್ಲಿ ಮಾತನಾಡಿದ ರವಿಕುಮಾರ್ ವೈಟಿಪಿಎಸ್ ಸಿಬ್ಬಂದಿ ಪ್ರತಿಭಟನೆ ಮಾಡಿದರೆ ಲಾಠಿ ಬೀಸಲು ಹೇಳುತ್ತೀರಿ. ಪೊಲೀಸ್ ರಾಜ್ಯವನ್ನು ನಿರ್ಮಿಸಲು ಹೊರಟಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. 

ಗ್ರಾಮ ವಾಸ್ತವ್ಯದ ಹೆಸರಿನಲ್ಲಿ ಜೆಡಿಎಸ್ ಜಾತ್ರೆ ನಡೆಸಿದೆ. ಸರ್ಕಾರದ ದುಡ್ಡಿನಲ್ಲಿ ಸಿಎಂ ಜೆಡಿಎಸ್ ಪಕ್ಷ ಸಂಘಟನೆ ಮಾಡುತಿದ್ದಾರೆ. ಕಾಂಗ್ರೆಸ್ ನಾಯಕರು ಈ ಬಗ್ಗೆ ಸ್ಪಷ್ಟನೆ ಕೊಡಬೇಕು. ಇನ್ನು ದೇವೇಗೌಡರು ಪುತ್ರನ ವ್ಯಾಮೋಹದಲ್ಲಿದ್ದಾರೆ. ಸಿಎಂ ಏನೇ ತಪ್ಪು ಮಾಡಿದರು ದೊಡ್ಡಗೌಡರು ಸಮರ್ಥನೆ ಮಾಡಿಕೊಳ್ಳುತಿದ್ದಾರೆ ಎಂದರು.

ಸಿಎಂ 'ಗ್ರಾಮ ಡ್ರಾಮ' ಮಾಡುತ್ತಿದ್ದಾರೆ . ನಾಟಕ ಮಾಡುವುದನ್ನು ಬಿಟ್ಟು ನಿಜವಾದ ಸಮಸ್ಯೆಗಳಿಗೆ ಸ್ಪಂದಿಸಿ.   ಒಂದು ವರ್ಷ ರೆಸಾರ್ಟ್ ವಾಸವಾಯ್ತು, ಈಗ ಡ್ರಾಮ ನಂತರ ಅಮೆರಿಕಾಗೆ ತೆರಳಲಿದ್ದಾರೆ.  ಸಿಎಂ ಕುಮಾರ ಸ್ವಾಮಿಯವರ ಗ್ರಾಮ ವಾಸ್ತವ್ಯಕ್ಕೆ ನಿಂಬೆಹಣ್ಣಿನ ಶಕ್ತಿ ಅಡ್ಡಿ ಮಾಡುತ್ತಿದೆ ಎಂದು ಟಾಂಗ್ ನೀಡಿದರು.