ಸಚಿವ ಸ್ಥಾನ ವಂಚಿತ ಎಂ. ಬಿ. ಪಾಟೀಲ್ ಅವರನ್ನು ಬಿಜೆಪಿಯ ರಾಯಚೂರು ನಗರ ಶಾಸಕ ಶಿವರಾಜ್ ಪಾಟೀಲ್ ಭೇಟಿಯಾಗಿದ್ದು ತೀವ್ರ ಕುತೂಹಲ ಮೂಡಿಸಿದೆ. 

ಬೆಂಗಳೂರು :  ಸಚಿವ ಸ್ಥಾನ ವಂಚಿತ ಎಂ. ಬಿ. ಪಾಟೀಲ್ ಅವರನ್ನು ಬಿಜೆಪಿಯ ರಾಯಚೂರು ನಗರ ಶಾಸಕ ಶಿವರಾಜ್ ಪಾಟೀಲ್ ಭೇಟಿಯಾಗಿದ್ದು ತೀವ್ರ ಕುತೂಹಲ ಮೂಡಿ ಸಿದೆ. ಭಾನುವಾರ ಮಧ್ಯಾಹ್ನ ಎಂ.ಬಿ. ಪಾಟೀಲ್ ಅವ ರನ್ನು ಭೇಟಿ ಮಾಡಿದ ಶಿವರಾಜ್ ಪಾಟೀಲ್ 5 ನಿಮಿಷಗಳ ಕಾಲ ಚರ್ಚೆ ಮಾಡಿದರು. ಬಂಡಾಯ ತಾರಕಕ್ಕೇರಿರುವ ಹಂತದಲ್ಲಿ ಶಿವರಾಜ್ ಪಾಟೀಲ್ ಭೇಟಿ ಕುತೂಹಲ ಹುಟ್ಟುಹಾಕಿದೆ. 

ಆದರೆ, ಭೇಟಿ ಬಳಿಕ ಮಾತನಾಡಿದ ಶಿವರಾಜ್ ಪಾಟೀಲ್, ನನ್ನ ಮತ್ತು ಪಾಟೀಲರ ಸಂಬಂಧ ಪಕ್ಷಗಳನ್ನು ಮೀರಿದ್ದು. ನಮ್ಮ ನಡುವೆ ಯಾವುದೇ ರಾಜಕೀಯ ಚರ್ಚೆ ಆಗಿಲ್ಲ. ಮಂತ್ರಿ ಆಗಿದ್ದಾಗ ನಮ್ಮ ಭಾಗದಲ್ಲಿ ಅನೇಕ ಕೆಲಸ ಮಾಡಿದ್ದಾರೆ.

ಹೀಗಾಗಿ ಇದೊಂದು ಕೃತಜ್ಞತಾ ಭೇಟಿ ಅಷ್ಟೇ ಹೊರತು ರಾಜಕೀಯ ಭೇಟಿಯಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿಗೆ ಆಹ್ವಾನ ನೀಡಲು ಬಂದಿಲ್ಲವಾ ಎಂಬ ಪ್ರಶ್ನೆಗೆ, ಇಲ್ಲ. ಈಗಿನ ಕಾಂಗ್ರೆಸ್ ಗಲಾಟೆಗೂ ನನಗೂ ಯಾವುದೇ ಸಂಬಂಧವಿಲ್ಲ. ಯಾರ ಮನವೊಲಿಸಲೂ ಬಂದಿಲ್ಲ. ಅದಕ್ಕೆಲ್ಲ ಪಕ್ಷದಲ್ಲಿ ಹಿರಿಯರಿದ್ದಾರೆ ಎಂದಷ್ಟೇ ಹೇಳಿದರು.