ನರೇಂದ್ರ ಮೋದಿ ಮುಂದಿನ ಬಾರಿಯೂ ಪ್ರಧಾನಿ ಆಗಬೇಕು ಹಾಗೂ ಬಿ.ಎಸ್‌. ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕೆಂದು ಹರಕೆ ಹೊತ್ತ ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಮಂಗಳವಾರ ಬೈಂದೂರಿನಿಂದ 

ಬೈಂದೂರು: ನರೇಂದ್ರ ಮೋದಿ ಮುಂದಿನ ಬಾರಿಯೂ ಪ್ರಧಾನಿ ಆಗಬೇಕು ಹಾಗೂ ಬಿ.ಎಸ್‌. ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕೆಂದು ಹರಕೆ ಹೊತ್ತ ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಮಂಗಳವಾರ ಬೈಂದೂರಿನಿಂದ ಕೊಲ್ಲೂರು ಶ್ರೀಮೂಕಾಂಬಿಕಾ ದೇವಾಲಯಕ್ಕೆ 25 ಕಿ.ಮೀ. ಪಾದಯಾತ್ರೆ ನಡೆಸಿದರು. ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಸುಕುಮಾರ್‌ ಶೆಟ್ಟಿತಮ್ಮ ನೂರಾರು ಅಭಿಮಾನಿ ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಕೊಲ್ಲೂರಿಗೆ ಕಾಲ್ನಡಿಗೆಯಲ್ಲಿ ಆಗಮಿಸಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.

ಮಂಗಳವಾರ ಮುಂಜಾನೆ 4.30ಕ್ಕೆ ಬೈಂದೂರಿನಲ್ಲಿರುವ ತಮ್ಮ ಮನೆಯಿಂದ ಹೊರಟ ಶಾಸಕರು ಮತ್ತು ಅಭಿಮಾನಿಗಳು 10.30ಕ್ಕೆ ಕೊಲ್ಲೂರು ತಲುಪಿದರು. ಅವರೊಂದಿಗೆ ಸುಮಾರು 300 ಮಂದಿ ಜೊತೆಗಿದ್ದರು. ನಡುವೆ ನಾಲ್ಕೆ ೖದು ಬಾರಿ ಭಾರೀ ಮಳೆ ಕೂಡ ಸುರಿಯಿತು. ಕಾರ್ಯಕರ್ತರು ಕೊಡೆ ಹಿಡಿಯುವುದಕ್ಕೆ ಮುಂದೆ ಬಂದರಾದರೂ ಶಾಸಕರು ಪಂಚೆಯನ್ನು ಎತ್ತಿ ಕಟ್ಟಿ, ಮಳೆಯಲ್ಲಿ ನೆನೆದುಕೊಂಡೇ ಪಾದಯಾತ್ರೆ ನಡೆಸಿದರು. ಕೊಲ್ಲೂರಿಗೆ ಆಗಮಿಸಿದ ಶಾಸಕರು ಸೌಪರ್ಣಿಕಾ ನದಿಯಲ್ಲಿ ಸ್ನಾನ ಮಾಡಿ ದೇವಿ ದರ್ಶನ, ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸಿದರು.