ಸಿಎಂ ಸಿದ್ದರಾಮಯ್ಯ ಕಲಬುರಗಿಗೆ ಬಂದಿದ್ದಾಗ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಒಂದು ಹೊತ್ತಿನ ಊಟಕ್ಕೆ ಬರೋಬ್ಬರಿ 10 ಲಕ್ಷ ರೂ ಖರ್ಚು ಮಾಡಿರುವುದು ಟೀಕೆಗೆ ಗುರಿಯಾಗಿದೆ.
ಕಲಬುರಗಿ (ಡಿ.25): ಸಿಎಂ ಸಿದ್ದರಾಮಯ್ಯ ಕಲಬುರಗಿಗೆ ಬಂದಿದ್ದಾಗ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಒಂದು ಹೊತ್ತಿನ ಊಟಕ್ಕೆ ಬರೋಬ್ಬರಿ 10 ಲಕ್ಷ ರೂ ಖರ್ಚು ಮಾಡಿರುವುದು ಟೀಕೆಗೆ ಗುರಿಯಾಗಿದೆ.
ಕಲಬುರಗಿ ಬಿಜೆಪಿ ಘಟಕ ಮಾಜಿ ಅಧ್ಯಕ್ಷ ರಾಜಕುಮಾರ್, ಶರಣ ಪ್ರಕಾಶ್ ವಿರುದ್ಧ ಆರೋಪ ಮಾಡಿದ್ದಾರೆ.
ಡಿ.16 ರಂದು ಕಲಬುರಗಿ ಐವಾನ್ ಇ ಶಾಹಿ ಗೆಸ್ಟ್ ಹೌಸ್ ನಲ್ಲಿ ಊಟವನ್ನು ಆಯೋಜಿಸಲಾಗಿತ್ತು. ಸಿಎಂಗೋಸ್ಕರ ಶರಣ ಪ್ರಕಾಶ್ ಪಾಟೀಲ್ ಬೆಳ್ಳಿ ತಟ್ಟೆಯಲ್ಲಿ ಊಟ ಆಯೋಜಿಸಿದ್ದರು. 1 ಊಟಕ್ಕೆ 800 ರೂಪಾಯಿಯಂತೆ 1000 ಜನರಿಗೆ ಊಟ ವ್ಯವಸ್ಥೆ ಮಾಡಲಾಗಿತ್ತು. ಉಸ್ತುವಾರಿ ಸಚಿವರು 10 ಲಕ್ಷ ರೂಗಳನ್ನು ನೀರಿನಂತೆ ಖರ್ಚು ಮಾಡಿದ್ದಾರೆ. ರೈತರ ಉದ್ದು, ಹೆಸರು, ತೊಗರಿ ಬೆಳೆಗೆ ಉತ್ತಮ ಬೆಲೆ ಕೊಡಿಸಲು ಆಗಿಲ್ಲ. ಸಿಎಂ ಮೆಚ್ಚಿಸುವುದಕ್ಕೆ ಬೆಳ್ಳಿ ತಟ್ಟೆಯಲ್ಲಿ ಭರ್ಜರಿ ಭೋಜನ ವ್ಯವಸ್ಥೆ ಮಾಡಿದ್ದು ಸರಿನಾ? ಸರ್ಕಾರಿ ಖರ್ಚಿನಲ್ಲಿ ಮೋಜಿ ಮಸ್ತಿ ಮಾಡಿದ್ದಾರೆ ಎಂದು ರಾಜಕುಮಾರ ಪಾಟೀಲ್ ಆರೋಪಿಸಿದ್ದಾರೆ.
