ಗಾಯಕಿ ಸ್ವಪ್ನಾ ಚೌಧರಿ ಕುರಿತು ಬಿಜೆಪಿ ಶಾಸಕ ವಿವಾದಾತ್ಮಕ ಹೇಳಿಕೆ'ಸೊಂಟ ಬಳುಕಿಸುವವಳು' ಎಂದು ಕರೆದ ಅಶ್ವಿನಿ ಕುಮಾರ್ ಚೋಪ್ರಾನವದೆಹಲಿಯ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದ ಸ್ವಪ್ನಾ ಚೌಧರಿಕಾಂಗ್ರೆಸ್ ಪಕ್ಷದ ಪರ ಪ್ರಚಾರ ನಡೆಸುವ ಸಾಧ್ಯತೆ

ನವದೆಹಲಿ(ಜೂ.25): ಹರಿಯಾಣದ ಪ್ರಸಿದ್ದ ನೃತ್ಯಗಾರ್ತಿ ಮತ್ತು ಗಾಯಕಿ ಸ್ವಪ್ನಾ ಚೌಧರಿ ಅವರನ್ನು 'ಸೊಂಟ ಬಳುಕಿಸುವವಳು' ಎಂದು ಕರೆಯುವ ಮೂಲಕ ಬಿಜೆಪಿ ಶಾಸಕ ಅಶ್ವಿನಿ ಕುಮಾರ್ ಚೋಪ್ರಾ ವಿವಾದ ಸೃಷ್ಟಿಸಿದ್ದಾರೆ.

ಸ್ವಪ್ನಾ ಚೌಧರಿ ಇತ್ತಿಚೀಗೆ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ನವದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಗೆ ಬಂದಿದ್ದರು. ಮೂಲಗಳ ಪ್ರಕಾರ ಸ್ವಪ್ನಾ ಮುಂಧಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಚುನಾವಣಾ ಪ್ರಚಾರ ಮಾಡಲಿದ್ದಾರೆ.

Scroll to load tweet…

ಸ್ವಪ್ನಾ ಅವರ ಕಾಂಗ್ರೆಸ್ ಕಚೇರಿ ಭೇಟಿಯನ್ನು ಅಣುಕಿಸಿರುವ ಅಶ್ವಿನಿ ಕುಮಾರ್, ಕಾಂಗ್ರೆಸ್ ಪಕ್ಷಕ್ಕೆ ಸೊಂಟ ಬಳುಕಿಸುವವರ ಸಹಾಯ ಬೇಕಾಗಿರುವುದು ನಿಜಕ್ಕೂ ದುರದೃಷ್ಟಕರ ಎಂದು ವ್ಯಂಗ್ಯವಾಡಿದ್ದಾರೆ. ಅಷ್ಟಕ್ಕೂ ಕಾಂಗ್ರೆಸ್ ಪಕ್ಷ ಚುನಾವಣೆ ಗೆಲ್ಲಲು ಯೋಚಿಸುತ್ತದೆಯೋ ಅಥವಾ ಸೊಂಟ ಬಳುಕಿಸುವವರ ಜೊತೆಗೆ ಡ್ಯಾನ್ಸ್ ಮಾಡುತ್ತದೆಯೋ ಆ ಪಕ್ಷಕ್ಕೆ ಬಿಟ್ಟ ವಿಚಾರ ಎಂದೂ ಅಶ್ವಿನಿ ಕುಮಾರ್ ಚೋಪ್ರಾ ಹೇಳಿದ್ದಾರೆ.

ಆದರೆ ತಾವು ಯಾವುದೇ ರಾಜಕೀಯ ಪಕ್ಷವನ್ನೂ ಸೇರುವುದಿಲ್ಲ ಎಂದು ಸ್ವಪ್ನಾ ಚೌಧರಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸ್ವಪ್ನಾ ಅವರು ಕೆಲವು ವಿವಾದಾತ್ಮಕ ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದು, 2016 ರಲ್ಲಿ ರಿಯಾಲಿಟಿ ಶೋ ಬಿಗ್ ಬಸ್ ನಲ್ಲಿ ಕಾಣಿಸಿಕೊಂಡಿದ್ದರು.