ಪಾಲಿಕೆ ಅಧಿಕಾರಿಯನ್ನು ಬ್ಯಾಟ್’ನಿಂದ ಹೊಡೆದ ಬಿಜೆಪಿ ಶಾಸಕ| ಸಾರ್ವಜನಿಕವಾಗಿ ಅಧಿಕಾರಿಗೆ ಬ್ಯಾಟ್’ನಿಂದ ಥಳಿತ| ಅಕ್ರಮ ಕಟ್ಟಡ ನೆಲಸಮ ಮಾಡಲು ಬಂದಿದ್ದ ಅಧಿಕಾರಿಗೆ ಹೊಡೆದ ಶಾಸಕ| ಮಧ್ಯಪ್ರದೇಶ ಬಿಜೆಪಿ ಹಿರಿಯ ನಾಯಕ ಕೈಲಾಶ್ ವಿಜಯ್ ವರ್ಗೀಯ ಪುತ್ರ| ಗೂಂಡಾ ವರ್ತನೆ ತೋರಿದ ಶಾಸಕ ಆಕಾಶ್ ವಿಜಯ್ ವರ್ಗೀಯ| ಅಧಿಕಾರಿಗೆ ಬ್ಯಾಟ್’ನಿಂದ ಹೊಡೆದ ವಿಡಿಯೋ ವೈರಲ್|
ಇಂಧೋರ್(ಜೂ.26): ಮಾತೆತ್ತಿದರೆ ನವಭಾರತದ ನಿರ್ಮಾಣ, ಸದೃಢ ಭಾರತ ಅಂತೆಲ್ಲಾ ಮಾತನಾಡುವ ಬಿಜೆಪಿ ನಾಯಕರು ಒಂದೆಯಾದರೆ, ಅಧಿಕಾರದ ದರ್ಪದಲ್ಲಿ ಬಹಿರಂಗವಾಗಿ ಅಸಭ್ಯ, ಅನಾಗರಿಕ ವರತ್ನೆ ತೋರಿ ಪಕ್ಷಕ್ಕೆ ಮುಜುಗರ ತರುವ ನಾಯಕರು ಮತ್ತೊಂದೆಡೆ.
ಬಿಜೆಪಿ ಹಿರಿಯ ನಾಯಕ ಕೈಲಾಶ್ ವಿಜಯ್ ವರ್ಗೀಯ ಪುತ್ರ, ಬಿಜೆಪಿ ಶಾಸಕ ಆಕಾಶ್ ವಿಜಯ್ ವರ್ಗೀಯ ಪಾಲಿಕೆ ಅಧಿಕಾರಿಯೋರ್ವರನ್ನು ಸಾರ್ವಜನಿಕವಾಗಿ ಕ್ರಿಕೆಟ್ ಬ್ಯಾಟ್’ನಿಂದ ಥಳಿಸಿದ್ದಾರೆ.
ಆಕಾಶ್ ವಿಜಯ್ ವರ್ಗೀಯ ಮಹಾನಗರ ಪಾಲಿಕೆ ಅಧಿಕಾರಿಗೆ ಬ್ಯಾಟ್’ನಿಂದ ಹೊಡೆಯುತ್ತಿರುವ ದೃಶ್ಯ ಬಾರೀ ವೈರಲ್ ಆಗಿದ್ದು, ಶಾಸಕನ ಗೂಂಡಾವರ್ತನೆಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಮಹಾನಗರ ಪಾಲಿಕೆಯ ಅಧಿಕಾರಿ ಅತಿಕ್ರಮಣ ವಿರೋಧಿ ಅಭಿಯಾನಕ್ಕಾಗಿ ಇಂದೋರ್’ಗೆ ಆಗಮಿಸಿದ್ದ ವೇಳೆ, ಆತನ ಮೇಲೆ ಆಕಾಶ್ ವಿಜಯ್ ವರ್ಗೀಯ ಹಲ್ಲೆ ಮಾಡಿದ್ದಾರೆ.
ಬಿಜೆಪಿ ಶಾಸಕನಿಂದ ಹಲ್ಲೆಗೊಳಗಾದ ಅಧಿಕಾರಿ ಇಲ್ಲಿನ ಗಂಜಿ ಕಾಂಪೌಂಡ್ ಪ್ರದೇಶದಲ್ಲಿ, ಅಕ್ರಮವಾಗಿ ನಿರ್ಮಿಸಲಾಗಿದ್ದ ಕಟ್ಟಡವನ್ನು ನೆಲಸಮ ಮಾಡಲು ಮುಂದಾದಾಗ ಈ ಘಟನೆ ನಡೆದಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಆಕಾಶ್ ಹಾಘೂ ಆತನ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
