ಜಿದ್ದಿಗೆ ಬಿದ್ದು ರಾಯಣ್ಣ ಬ್ರಿಗೇಡ್​  ಕಟ್ಟಲು ಹೊರಟಿರುವ ಈಶ್ವರಪ್ಪ ವಿರುದ್ಧ ಈಗ ಬಿಜೆಪಿಯಲ್ಲಿ ಬೇಹುಗಾರಿಕೆ ನಡೆಯುತ್ತಿದೆಯಾ? ಹೌದು ಎನ್ನುತ್ತವೆ ರಾಜ್ಯ ಬಿಜೆಪಿಯ ಕೆಲವು ಮೂಲಗಳು. ಬಿರುಸಿನಲ್ಲಿ ನಡೆಯುತ್ತಿರುವ ಬ್ರಿಗೇಡ್​ನ ಪಿನ್​ ಟು ಪಿನ್​ ಮಾಹಿತಿ ಹೈಕಮಾಂಡ್​ಗೆ ರವಾನೆಯಾಗುತ್ತಿದೆಯಂತೆ. ಮೊನ್ನೆ ಬೆಂಗಳೂರಿನಲ್ಲಿ ನಡೆದ ಸಭೆ ಸೇರಿದಂತೆ ಎಲ್ಲಾ ಚಟುವಟಿಕೆಗಳ ಮಾಹಿತಿ ಸಾಕ್ಷಿ  ಸಮೇತ ಹೈಕಮಾಂಡ್​  ಅಂಗಳ ತಲುಪಿದಿಯಂತೆ.

ಬೆಂಗಳೂರು(ಜ.13): ಜಿದ್ದಿಗೆ ಬಿದ್ದು ರಾಯಣ್ಣ ಬ್ರಿಗೇಡ್​ ಕಟ್ಟಲು ಹೊರಟಿರುವ ಈಶ್ವರಪ್ಪ ವಿರುದ್ಧ ಈಗ ಬಿಜೆಪಿಯಲ್ಲಿ ಬೇಹುಗಾರಿಕೆ ನಡೆಯುತ್ತಿದೆಯಾ? ಹೌದು ಎನ್ನುತ್ತವೆ ರಾಜ್ಯ ಬಿಜೆಪಿಯ ಕೆಲವು ಮೂಲಗಳು. ಬಿರುಸಿನಲ್ಲಿ ನಡೆಯುತ್ತಿರುವ ಬ್ರಿಗೇಡ್​ನ ಪಿನ್​ ಟು ಪಿನ್​ ಮಾಹಿತಿ ಹೈಕಮಾಂಡ್​ಗೆ ರವಾನೆಯಾಗುತ್ತಿದೆಯಂತೆ. ಮೊನ್ನೆ ಬೆಂಗಳೂರಿನಲ್ಲಿ ನಡೆದ ಸಭೆ ಸೇರಿದಂತೆ ಎಲ್ಲಾ ಚಟುವಟಿಕೆಗಳ ಮಾಹಿತಿ ಸಾಕ್ಷಿ ಸಮೇತ ಹೈಕಮಾಂಡ್​ ಅಂಗಳ ತಲುಪಿದಿಯಂತೆ.

ಹೈಕಮಾಂಡ್​ಗೆ ರವಾನೆಯಾಗುತ್ತಿದೆಯಂತೆ ಬ್ರಿಗೇಡ್​ ಚಟುವಟಿಕೆ ಮಾಹಿತಿ

ಬಿಜೆಪಿ-ಬ್ರಿಗೇಡ್ ನಡುವಿನ ಸಂಘರ್ಷ ದಿನೇ ದಿನೇ ತೀವ್ರಸ್ವರೂಪ ಪಡೆದುಕೊಳ್ಳುತ್ತಿದೆ. ವರಿಷ್ಠರು ಸೂಚನೆ ನೀಡಿದರೂ ತಲೆಕೆಡಿಸಿಕೊಳ್ಳದ ಕೆ.ಎಸ್​. ಈಶ್ವರಪ್ಪ ರಾಯಣ್ಣ ಬ್ರಿಗೇಡ್​ ಚಟುವಟಿಕೆಯನ್ನು ರಾಜಾರೋಷವಾಗಿ ಮುಂದುವರಿಸಿದ್ದಾರೆ. ಕೇವಲ ಬಾಯಿ ಮಾತಿನಲ್ಲಿ ಈಶ್ವರಪ್ಪಗೆ ವರಿಷ್ಠರಿಂದ ಎಚ್ಚರಿಕೆ ಕೊಡಿಸಿದ್ದ ರಾಜ್ಯ ಬಿಜೆಪಿ ನಾಯಕತ್ವ ಈಗ ಈಶ್ವರಪ್ಪ ನಡೆಯನ್ನು ಗಂಭೀರವಾಗಿ ಪರಿಗಣಿಸಿದಂತಿದೆ. ಹೀಗಾಗೇ ಬ್ರಿಗೇಡ್ ಚಟುವಟಿಕೆಯ ಪಿನ್ ಟು ಪಿನ್ ಮಾಹಿತಿಯನ್ನೂ ಹೈಕಮಾಂಡ್​ಗೆ ಕಳುಹಿಸಿಕೊಡಲಾಗುತ್ತಿದೆ ಎನ್ನಲಾಗ್ತಿದೆ. ಮೊನ್ನೆ ಬೆಂಗಳೂರಿನಲ್ಲಿ ನಡೆದ ಬ್ರಿಗೇಡ್​ನ ಪೂರ್ಣ ಮಾಹಿತಿ ಕೂಡ ಈಗಾಗಲೇ ಹೈಕಮಾಂಡ್​ ಅಂಗಳ ತಲುಪಿದೆ ಎನ್ನಲಾಗಿದೆ.

ವರಿಷ್ಠರ ಗಮನ ಸೆಳೆಯಲು ಗಂಭೀರ ಪ್ರಯತ್ನ 

ಪಂಚರಾಜ್ಯಗಳ ಚುನಾವಣೆಯಲ್ಲಿ ಬ್ಯುಸಿಯಾಗಿರುವ ಹೈಕಮಾಂಡ್'​ಗೆ ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಸಮಯವಿಲ್ಲ. ಆದರೂ ವರಿಷ್ಠರ ಗಮನ ಸೆಳೆಯಲು ಗಂಭೀರ ಪ್ರಯತ್ನ ಮಾಡಿರುವ ರಾಜ್ಯ ನಾಯಕತ್ವ, ಬ್ರಿಗೇಡ್ ಚಟುವಟಿಕೆಯ ಪುರಾವೆ ಸಮೇತ. ಅಂದರೆ ವೀಡಿಯೋ ಸಮೇತ ಮಾಹಿತಿ ಹೈಕಮಾಂಡ್​'ಗೆ ರವಾನಿಸಲಾಗಿದೆ ಎಂಬ ಮಾತು ಬಿಜೆಪಿ ಕಾರಿಡಾರ್'​ನಲ್ಲಿ ಬಲವಾಗಿ ಕೇಳಿ ಬಂದಿದೆ.

ರಾಜ್ಯ ಚುನಾವಣೆ ಮುಗಿಯುವುದನ್ನು ಬ್ರಿಗೇಡ್ ವಿರೋಧಿ ಬಣ ಕಾಯುತ್ತಿದೆ. ಇತ್ತ ಈಶ್ವರಪ್ಪ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಮುನ್ನುಗ್ಗುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ಮುಂದೊಂದು ದಿನ ಕಮಲದಲ್ಲಿ ಭಾರೀ ತಳಮಳ ಸೃಷ್ಟಿಸುವ ಮುನ್ಸೂಚನೆ ನೀಡುತ್ತಿರುವುದಂತೂರೋದಂತು ಸತ್ಯ

ವರದಿ: ಕಿರಣ್ ಹನಿಯಡ್ಕ, ಸುವರ್ಣ ನ್ಯೂಸ್