ಬೀಜಿಂಗ್‌ [ಜು.1]: 98 ವರ್ಷಗಳ ದೀರ್ಘ ಇತಿಹಾಸ ಹೊಂದಿರುವ ಆಡಳಿತಾರೂಢ ‘ಚೀನಾ ಕಮ್ಯೂನಿಸ್ಟ್‌ ಪಕ್ಷ’(ಸಿಪಿಸಿ)ದ ಸದಸ್ಯರ ಸಂಖ್ಯೆ 9 ಕೋಟಿ ದಾಟಿದೆ ಎಂದು ಪಕ್ಷ ಅಧಿಕೃತವಾಗಿ ಪ್ರಕಟಿಸಿದೆ.

ಪಕ್ಷ ಸ್ಥಾಪನೆಯಾದ 1949ರಿಂದಲೂ ಚೀನಾದಲ್ಲಿ ಆಡಳಿತ ನಡೆಸುತ್ತಿರುವ ಶಕ್ತಿಯುತ ‘ಚೀನಾ ಕಮ್ಯೂನಿಸ್ಟ್‌ ಪಕ್ಷ’(ಸಿಪಿಸಿ)ದಲ್ಲಿ ಒಟ್ಟು 9.59 ಕೋಟಿ ಸದಸ್ಯರಿದ್ದಾರೆ ಎಂದು ಸ್ವತಃ ಪಕ್ಷವೇ ಹೇಳಿಕೊಂಡಿದೆ. ಆದರೂ ಅದು ಈಗಲೂ ಅದು ವಿಶ್ವದ ಅತಿದೊಡ್ಡ ಪಕ್ಷಗಳ ಪೈಕಿ 2ನೇ ಸ್ಥಾನದಲ್ಲಿಯೇ ಉಳಿದುಕೊಂಡಿದೆ.

ಮೊದಲ ಸ್ಥಾನದಲ್ಲಿ ಭಾರತದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಇದೆ. 2015ರಲ್ಲಿ 11 ಕೋಟಿ ಸದಸ್ಯರೊಂದಿಗೆ ಬಿಜೆಪಿ, ವಿಶ್ವದ ಅತಿದೊಡ್ಡ ಪಕ್ಷ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಇನ್ನು ಅಮೆರಿಕದ ಡೆಮಾಕ್ರಟಿಕ್‌ ಪಕ್ಷವು 4.5 ಕೋಟಿ ಸದಸ್ಯರ ಮೂಲಕ ವಿಶ್ವದ 3ನೇ ಅತಿದೊಡ್ಡ ಪಕ್ಷವಾಗಿದೆ.