ಚುನಾವಣೆಗೆ ಇನ್ನು ಕೆಲವೇ ತಿಂಗಳು ಮಾತ್ರ ಬಾಕಿ ಉಳಿದಿವೆ. ರಾಜಕೀಯ ಪಕ್ಷಗಳು ಜನರ ಮತ ಸೆಳೆಯಲು ಕಸರತ್ತು ಆರಂಭಿಸಿದ್ದಾರೆ.

ಬೆಂಗಳೂರು (ಫೆ.09): ಚುನಾವಣೆಗೆ ಇನ್ನು ಕೆಲವೇ ತಿಂಗಳು ಮಾತ್ರ ಬಾಕಿ ಉಳಿದಿವೆ. ರಾಜಕೀಯ ಪಕ್ಷಗಳು ಜನರ ಮತ ಸೆಳೆಯಲು ಕಸರತ್ತು ಆರಂಭಿಸಿದ್ದಾರೆ.

ರಾಜ್ಯದಲ್ಲಿ ಮತ ಬ್ಯಾಂಕ್'​​​ಗೆ ಬಿಜೆಪಿ ಮತ್ತೊಂದು ಮಾಸ್ಟರ್ ಸ್ಟ್ರೋಕ್ ಮಾಡಿದೆ. ಪರಿವರ್ತನಾ ರ್ಯಾಲಿ, ದಲಿತರ ಮನೆಯಲ್ಲಿ ವಾಸ್ತವ್ಯದ ಬಳಿಕ ಸ್ಲಂ ವಾಸ್ತವ್ಯಕ್ಕೆ ಬಿಎಸ್​​​ ಯಡಿಯೂರಪ್ಪ ಪ್ಲಾನ್ ನಡೆಸಿದ್ದಾರೆ. ​​​

 ದಿನೇಶ್ ಗುಂಡೂರಾವ್ ಪ್ರತಿನಿಧಿಸುವ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಸ್ಲಂವೊಂದರಲ್ಲಿ ಯಡಿಯೂರಪ್ಪ ನಾಳೆ ವಾಸ್ತವ್ಯ ಹೂಡಲಿದ್ದಾರೆ. ರಾಜ್ಯದ 2800 ಸ್ಲಂಗಳಲ್ಲಿ ಆಯಾ ಜಿಲ್ಲೆಯ ಬಿಜೆಪಿ ಮುಖಂಡರು ವಾಸ್ತವ್ಯ ಹೂಡಲಿದ್ದಾರೆ. ಮುಂದಿನ ತಿಂಗಳು ಸ್ಲಂ ನಿವಾಸಿಗಳ ಸಮಾವೇಶ ನಡೆಯಲಿದೆ. ಇದನ್ನು ಮುಂದಿಟ್ಟುಕೊಂಡು ಬಿಜೆಪಿ ಸ್ಲಂ ಪಾಲಿಟಿಕ್ಸ್ ನಡೆಸುತ್ತಿದೆ. ವಾಸ್ತವ್ಯದ ಬಳಿಕ ರಾಜ್ಯದ ಎಲ್ಲ ಸ್ಲಂಗಳ ಪರಿಸ್ಥಿತಿ ‌ಕುರಿತು ರಿಪೋರ್ಟ್ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.