ನವದೆಹಲಿ [ಆ.02]: ಎರಡು ವರ್ಷಗಳ ಹಿಂದೆ ಉನ್ನಾವೋದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಹಾಗೂ ಆಕೆಯ ಕುಟುಂಬವನ್ನೇ ಅಪಘಾತ ನಡೆಸಿ ಕೊಲ್ಲಲು ಯತ್ನಿಸಿದ ಆರೋಪ ಎದುರಿಸುತ್ತಿರುವ ಶಾಸಕ ಕುಲದೀಪ್‌ ಸೆಂಗರ್‌ನನ್ನು ಬಿಜೆಪಿ ಉಚ್ಚಾಟಿಸಿದೆ. 

4 ಬಾರಿ ಉತ್ತರಪ್ರದೇಶ ವಿಧಾನಸಭೆಗೆ ಆರಿಸಿ ಬಂದಿರುವ ಅವರು 2002ರಲ್ಲಿ ಬಿಎಸ್ಪಿ, 2007 ಹಾಗೂ 2012ರಲ್ಲಿ ಸಮಾಜವಾದಿ ಪಕ್ಷ ಹಾಗೂ 2017ರಲ್ಲಿ ಬಿಜೆಪಿಯಿಂದ ಗೆದ್ದಿದ್ದಾರೆ.

ಬಿಜೆಪಿಯ ಈ ನಿರ್ಧಾರದ ಬಗ್ಗೆ ವ್ಯಂಗ್ಯವಾಡಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ, ಕ್ರಿಮಿನಲ್‌ಗೆ ಇಷ್ಟುದಿನ ಬಲ ತುಂಬಿದ್ದನ್ನು ಬಿಜೆಪಿ ಒಪ್ಪಿಕೊಂಡಿದೆ. ಆ ತಪ್ಪನ್ನು ಸರಿಪಡಿಸಿಕೊಳ್ಳಲು ಕೊನೆಗೂ ಕ್ರಮ ಕೈಗೊಂಡಿದೆ ಎಂದು ಟ್ವೀಟ್‌ ಮಾಡಿದ್ದಾರೆ.