ಪತಿ ಸಾವಿನಿಂದ 2015ರ ಪಾಲಿಕೆ ಚುನಾವಣೆಯಿಂದ ದೂರ ಉಳಿದಿದ್ದ ಮಂಜುಳಾದೇವಿ ಮೂರು ವರ್ಷಗಳ ಬಳಿಕ ರಾಜಕೀಯ ಜೀವನಕ್ಕೆ ಮರಳಿದ್ದಾರೆ.

ಬೆಂಗಳೂರು(ಡಿ.25): ಕೆ.ಆರ್. ಪುರದ ದೇವಸಂದ್ರ ವಾರ್ಡ್‌ನ ಬಿಬಿಎಂಪಿ ಮಾಜಿ ಸದಸ್ಯೆ ಮಂಜುಳಾದೇವಿ ಅವರು ಬಿಜೆಪಿ ಪಕ್ಷ ತೊರೆದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಮಂಜುಳಾದೇವಿ ಅವರು ಬಿಜೆಪಿಯಿಂದ ಪಾಲಿಕೆ ಸದಸ್ಯೆಯಾಗಿದ್ದರು. 2014ರಲ್ಲಿ ಪತಿ ಸಿರಿಪುರ ಎನ್. ಶ್ರೀನಿವಾಸ್‌ರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.

ಪತಿ ಸಾವಿನಿಂದ 2015ರ ಪಾಲಿಕೆ ಚುನಾವಣೆಯಿಂದ ದೂರ ಉಳಿದಿದ್ದ ಮಂಜುಳಾದೇವಿ ಮೂರು ವರ್ಷಗಳ ಬಳಿಕ ರಾಜಕೀಯ ಜೀವನಕ್ಕೆ ಮರಳಿದ್ದಾರೆ. ಆದರೆ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿರುವುದು ಕುತೂಹಲ ಮೂಡಿಸಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಸಚಿವ ಕೃಷ್ಣಬೈರೇಗೌಡ, ಮೇಯರ್ ಸಂಪತ್‌ರಾಜ್ ಹಲವರು ಹಾಜರಿದ್ದರು.