‘ರಮಾನಾಥ್ ರೈ ಒಬ್ಬ ಅರೆಹುಚ್ಚ’, ‘ಸಿದ್ದರಾಮಯ್ಯ ಅಹಂಕಾರಿ’: ತುಂಬಿದ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷನ ಅಸಭ್ಯಮಾತು
ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ, ಅರಣ್ಯ ಸಚಿವ ರಮಾನಾಥ್ ರೈ ಹಾಗೂ ಶಾಸಕಿ ಶಕುಂತಲಾ ಶೆಟ್ಟಿ ಅವರನ್ನು ಅಸಭ್ಯ ಭಾಷೆಯಲ್ಲಿ ನಿಂದಿಸಿದ್ದಾರೆ.
ಮಂಗಳೂರು(ಅ.20): ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ, ಅರಣ್ಯ ಸಚಿವ ರಮಾನಾಥ್ ರೈ ಹಾಗೂ ಶಾಸಕಿ ಶಕುಂತಲಾ ಶೆಟ್ಟಿ ಅವರನ್ನು ಅಸಭ್ಯ ಭಾಷೆಯಲ್ಲಿ ನಿಂದಿಸಿದ್ದಾರೆ.
ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿರುವ ಸಂಜೀವ್ ಮಠಂದೂರು ರಮಾನಾಥ್ ರೈ ಒಬ್ಬ ಅರೆಹುಚ್ಚ . ಸಿದ್ದರಾಮಯ್ಯ ಅಹಂಕಾರಿ, ತನ್ವೀರ್ ಸೇಠ್, ರೋಷನ್ ಬೇಗ್ ಬುದ್ಧಿ ಬ್ರಮಣರು, ಅಂತ ಅಸಭ್ಯ ಮಾತುಗಳಿಂದ ಟೀಕಿಸಿದ್ದಾರೆ.
ವಿಟ್ಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷ ವಿರುದ್ಧ ದೂರು ನೀಡಲಾಗಿದೆ. ಮರಳು ದಂಧೆಯಲ್ಲಿ ಮತ್ತು ಗಾಂಜಾ ಮಾಫಿಯಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನೇರ ಭಾಗಿಯಾಗಿದ್ದಾರೆ. ಅರಣ್ಯ ಸಚಿವರ ಊರಿನಲ್ಲಿ ಅರಣ್ಯ ಮಾಫಿಯಾ ನಡೆಯುತ್ತಿದೆ ಎಂದೆಲ್ಲ ಟೀಕಿಸಿದ್ದರು.