Asianet Suvarna News Asianet Suvarna News

ಯಡಿಯೂರಪ್ಪಗೆ ಅತೃಪ್ತರಿಂದ ಮೇ 10ರ ಗಡುವು; ಈಶ್ವರಪ್ಪ ಸಿಎಂ ಅಭ್ಯರ್ಥಿ ಆಗಲಿ

‘ಈಶ್ವರಪ್ಪ ಸಿಎಂ ಅಭ್ಯರ್ಥಿ ಆಗಲಿ'

ಗುರುವಾರ ನಡೆದ ಬಿಜೆಪಿ ಅತೃಪ್ತ ಮುಖಂಡರ ಸಭೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು, ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂಬ ಹೇಳಿಕೆಗಳೂ ಕೇಳಿಬಂದವು. ಸಭೆಯ ಅಂಗವಾಗಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸ್ಥಳೀಯ ಮುಖಂಡರ ಪೈಕಿ ಕೆಲವರು ಅಭಿಪ್ರಾಯ ತಿಳಿಸುವ ವೇಳೆ ಈಶ್ವರಪ್ಪ ಪರ ಬ್ಯಾಟಿಂಗ್‌ ನಡೆಸಿದರು. ಸ್ವಾರಸ್ಯಕರ ಸಂಗತಿ ಎಂದರೆ, ಹಾಗೆ ಹೇಳಿದ ಸ್ಥಳೀಯ ಮುಖಂಡರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಆಯಾ ಜಿಲ್ಲಾ ಅಥವಾ ತಾಲೂಕಿನ ಪದಾಧಿಕಾರಿಗಳೂ ಆಗಿದ್ದರು. ಆದರೆ, ರಾಜ್ಯ ನಾಯಕರು ಮಾತನಾಡುವ ವೇಳೆ ಇಂಥ ಹೇಳಿಕೆಗಳು ಕೇಳಿಬರಲಿಲ್ಲ

BJP Dissidents want KS Eshwarappa to be CM

ಬೆಂಗಳೂರು: ತಮ್ಮ ಬೇಡಿಕೆಗಳನ್ನು ಬರುವ ಮೇ 10ರೊಳಗಾಗಿ ಈಡೇರಿಸಬೇಕು ಎಂದು ಬಿಜೆಪಿಯ ಅತೃಪ್ತ ಮುಖಂ ಡರು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಗಡವು ನೀಡಿದ್ದಾರೆ.

ಅಷ್ಟರೊಳಗಾಗಿ ಬೇಡಿಕೆ​ಗಳನ್ನು ಈಡೇರಿಸದಿದ್ದರೆ ಮೇ 20ರಂದು ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ. ಜತೆಗೆ, ರಾಜ್ಯದಲ್ಲಿನ ಪಕ್ಷದೊಳಗೆ ನಡೆಯುತ್ತಿರುವ ಬೆಳವಣಿಗೆ ಕುರಿತು ತಿಳಿಸಲು ದೆಹಲಿಗೆ ನಿಯೋಗ ತೆರಳುವ ಬಗ್ಗೆ ನಿರ್ಧರಿಸಲಾಗಿದೆ.

ಗುರುವಾರ ನಡೆದ ಅತೃಪ್ತ ಮುಖಂಡರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಪ್ರತಿಭಟನಾ ಮೆರವಣಿಗೆ ನಡೆಸುವ ಎಚ್ಚರಿಕೆಯ ನಿರ್ಣಯವನ್ನು ಕೆ.ಎಸ್‌.ಈಶ್ವರಪ್ಪ ಅವರೇ ಪ್ರಸ್ತಾಪಿಸಿದರು.

ಸಭೆಯಲ್ಲಿ ಕೈಗೊಂಡ ಇತರ ನಿರ್ಣಯಗಳು
್ಝ ರಾಷ್ಟ್ರೀಯ ಅಧ್ಯಕ್ಷರು ರಚಿಸಿರುವ 4 ಜನರ ಸಮಿತಿ ಸೇರಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು.
್ಝ ಪ್ರತಿ ವಿಭಾಗದ ಸಭೆ ಕರೆಯಬೇಕು. ಹಿಂದಿನ ಜಿಲ್ಲಾ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಈಗಿನ ಜಿಲ್ಲಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳು, ಹಾಗೂ ಆಯ್ದ ಕೆಲವು ಪ್ರಮುಖರು ರಾಜ್ಯದ ಕೋರ್‌ ಕಮಿಟಿ ಸದಸ್ಯರ ನೇತೃತ್ವದಲ್ಲಿ ಸಂಘಟನೆಯ ಅಂತರಿಕ ಸಮಸ್ಯೆ ಬಗೆಹರಿಸಲು ಚರ್ಚಿಸಿ ಅಲ್ಲಿನ ನಿರ್ಣಯಗಳನ್ನು ಜಾರಿಗೊಳಿಸಬೇಕು.
್ಝ ಕೆಲವು ಪದಾಧಿಕಾರಿಗಳನ್ನು ಬದಲಾಯಿಸಿ, ಪಕ್ಷದ ಸಂವಿಧಾನದ ಆಶಯದಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ನೇಮಿಸಲು ಕೋರ್‌ ಟೀಂ ನಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಬೇಕು.
್ಝ ಅನವಶ್ಯಕವಾಗಿ ಆರೋಪ ಹೊರಿಸಿ ಪಕ್ಷದಿಂದ ಅಮಾನತುಗೊಳಿಸಿರುವ ಎಲ್ಲಾ ಕಾರ್ಯಕರ್ತರ ಮೇಲಿನ ಕ್ರಮ ಹಿಂಪಡೆಯಬೇಕು.
್ಝ ಇತ್ತೀಚಿನ ಚುನಾವಣೆಯಲ್ಲಿ ಪಕ್ಷ ವಿರೋಧಿ ವರ್ತನೆ ತೋರಿ ಸೋಲಿಗೆ ಕಾರಣರಾದವರ ವಿಚಾರಣೆ ನಡೆಸಲು ವಿಶೇಷ ಸಮಿತಿ ರಚಿಸಬೇಕು.
್ಝ ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ಆಯೋಜನೆ ಮಾಡಿ ಎಲ್ಲಾ ಆಂತರಿಕ ಭಿನ್ನಾಭಿಪ್ರಾಯ ಬಗೆಹರಿಸಿ ಗೆಲುವಿಗಾಗಿ ಸಂಪೂರ್ಣ ಸಜ್ಜಾಗುವ ಸಂಕಲ್ಪ ತೊಡುವ ಸಭೆ ಆಯೋಜಿಸಬೇಕು.
್ಝ ರಾಜ್ಯದ ಸಂಘಟನೆ ಹೊಣೆಗಾರಿಕೆಯ ಪ್ರಭಾರಿ ಯಾಗಿರುವವರು ರಾಜ್ಯ ಸ್ತರದಲ್ಲಿ ಪ್ರವಾಸ ಮಾಡ ಬೇಕು, ತಾಲೂಕು, ಜಿಲ್ಲಾ ವಿಭಾಗ ಹಂತದಲ್ಲಿ ಪಕ್ಷದ ಬಲವರ್ಧನೆ ಮತ್ತು ತಂತ್ರಗಾರಿಕೆ ರೂಪಿಸಬೇಕು.
್ಝ ರಾಷ್ಟ್ರೀಯ ನೇತೃತ್ವಕ್ಕೆ ಈ ಸಭೆ ಎಲ್ಲಾ ಸಂಗತಿಗಳು ತಿಳಿಸಲು ನಿಯೋಗ ಹೋಗಬೇಕು.

Follow Us:
Download App:
  • android
  • ios