- ಮೂರು ನಾಲ್ಕು ದಿನಗಳಿಂದ ಬಿಜೆಪಿ ಕಚೇರಿ ಮುಂದೆ ಜಮಾಯಿಸಿರುವ ಮಹದಾಯಿ ಹೋರಾಟಗರರು.- ಯಡಿಯೂರಪ್ಪ ಅವರಿಂದ ಸ್ಪಷ್ಟ ಭರವಸೆಯ ನಿರೀಕ್ಷೆಯಲ್ಲಿ ಹೋರಾಟಗಾರರು.- ಪ್ರತಿಭಟನೆಗೆ ಬೆದರಿದೆ ಬಿಜೆಪಿ, ಸಭೆ ಸ್ಥಳ ಶಿಫ್ಟ್.

ಬೆಂಗಳೂರು: ಕಳೆದ ಮೂರು ನಾಲ್ಕು ದಿನಗಳಿಂದ ಮಹದಾಯಿ ಹೋರಾಟಗಾರರು ನಗರದ ಬಿಜೆಪಿ ಕಚೇರಿ ಮುಂದೆ ಧರಣಿ ನಡೆಸುತ್ತಿದ್ದು, ಬಿಜೆಪಿಯಿಂದ ಸ್ಪಷ್ಟ ಉತ್ತರ ಬಂದರೆ, ಸ್ಥಳದಿಂದ ಕದಲುವುದಾಗಿ ಹೇಳುತ್ತಿದ್ದಾರೆ.

ಪ್ರತಿಭಟನಾಕಾರರಿಗೆ ಬೆದರಿದೆ ಬಿಜೆಪಿ, ಪಕ್ಷದ ಕಚೇರಿಯಲ್ಲಿ ನಡೆಯಬೇಕಾಗಿದ್ದ ಕೋರ್ ಕಮಿಟಿ ಸಭೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸಕ್ಕೆ ಸ್ಥಳಾಂತರಿಸಿದ್ದು, ಅಲ್ಲಿ ಈ ಸಂಬಂಧ ಯಾವ ನಿರ್ಧಾರ ತೆಗೆದುಕೊಳ್ಳಬಹುದೆಂಬುದನ್ನು ನಿರ್ಧರಿಸಲಾಗುತ್ತದೆ, ಎನ್ನಲಾಗುತ್ತಿದೆ.

ಮಹದಾಯಿ ಹೋರಾಟಕ್ಕೆ ಚಿತ್ರರಂಗ ಬೆಂಬಲ

ಪ್ರತಿಭಟನಾಕಾರರ ಮನವಿಗೆ ಸ್ಪಂದಿಸಿದ ಸ್ಯಾಂಡಲ್‌ವುಡ್, ಹೋರಾಟಕ್ಕೆ ಕೈ ಜೋಡಿಸುವುದಾಗಿ ಭರವಸೆ ನೀಡಿದೆ. ಮಧ್ಯಾಹ್ನದ ನಂತರ ಪ್ರತಿಭಟನಾ ಸ್ಥಳಕ್ಕೆ ಶಿವರಾಜ್‌ಕುಮಾರ್ ಸೇರಿ ನಟರು ಆಗಮಿಸುವ ನಿರೀಕ್ಷೆ ಇದ್ದು, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ನೇತೃತ್ವ ವಹಿಸಲಿದಿದ್ದಾರೆ.