ಬೆಂಗಳೂರು [ಆ.03]:  ಮಾಜಿ ಸಚಿವ ಜಮೀರ್ ಅಹಮದ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. 

ಕಳೆದ ಚುನಾವಣೆ ಸಂದರ್ಭದಲ್ಲಿ  ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ನೀಡಿರುವ ಆರೋಪದಡಿಯಲ್ಲಿ ದೂರು ನೀಡಲಾಗಿದೆ. 

ಕಾಂಗ್ರೆಸ್ ತೀರ್ಮಾನದ ಮೇಲೆ ಮುಂದಿನ ಭವಿಷ್ಯ : ದೇವೇಗೌಡ

ದಾಖಲೆಗಳ ಸಹಿತ ಬಿಜೆಪಿ ಮುಖಂಡರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.  ಬೆಂಗಳೂರು ಬಿಜೆಪಿ ವಕ್ತಾರ NR ರಮೇಶ್ ದೂರು ದಾಖಲಿಸಿದ್ದಾರೆ. 

ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹ ಮಾಡಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.