Asianet Suvarna News Asianet Suvarna News

ಕಾಂಗ್ರೆಸ್ಸನ್ನು ಪಾಕ್‌ಗೆ ಹೋಲಿಸಿದ ಬಿಜೆಪಿ

ಕಾಂಗ್ರೆಸ್‌, ಪಾಕ್‌ ಎರಡಕ್ಕೂ ಮೋದಿ ಬಗ್ಗೆ ಹತಾಶೆ: ಸಂಬಿತ್‌, ಮೋದಿ ಅವರನ್ನು ರಾಜಕೀಯದಿಂದ ತೆಗೆವುದೇ ಅವರ ಗುರಿ ಎಂದು ಬಿಜೆಪಿ ವಕ್ತಾರ ಹೇಳಿದ್ದಾರೆ.

BJP compares Congress with Pakistan
Author
Bengaluru, First Published Sep 25, 2018, 12:03 PM IST

ನವದೆಹಲಿ: ಆರ್‌ಎಸ್‌ಎಸ್‌ ಅನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಅರಬ್‌ ದೇಶಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮುಸ್ಲಿಂ ಬ್ರದರ್‌ಹುಡ್‌ಗೆ ಹೋಲಿಸಿದ್ದಾಯ್ತು. ಈಗ ಕಾಂಗ್ರೆಸ್‌ ಪಕ್ಷವನ್ನು ಬಿಜೆಪಿಯು ಭಾರತದ ಶತ್ರುದೇಶ ಪಾಕಿಸ್ತಾನಕ್ಕೆ ಹೋಲಿಕೆ ಮಾಡಿದೆ.

ಕಾಂಗ್ರೆಸ್‌ ಪಕ್ಷ ಹಾಗೂ ಪಾಕಿಸ್ತಾನ ಎರಡಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಹತಾಶೆ ಇದೆ. ಅವರಿಬ್ಬರ ಏಕೈಕ ಗುರಿ ಮೋದಿ ಅವರನ್ನು ದೇಶದ ರಾಜಕಾರಣದಿಂದಲೇ ತೆಗೆದುಹಾಕುವುದು ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌, ಹಾಲಿ ಹಾಗೂ ಮಾಜಿ ಸಚಿವರು ಸೇರಿದಂತೆ ಪಾಕ್‌ ನಾಯಕರು ಮೋದಿ ಅವರನ್ನು ಟೀಕಿಸಿ ಮಾಡಿರುವ ಟ್ವೀಟ್‌ಗಳನ್ನು ಓದಿದರು. ಇವರೆಲ್ಲಾ ರಾಹುಲ್‌ ಗಾಂಧಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಕೆಲವು ವ್ಯಕ್ತಿಗಳಿಗೆ ರಾಹುಲ್‌ ಗಾಂಧಿ ಭಾರತದಲ್ಲಿ ದೊಡ್ಡ ವ್ಯಕ್ತಿಯಾಗುವುದು ಬೇಕಾಗಿದೆ. ಅವರೆಲ್ಲಾ ಯಾರು? ಪಾಕಿಸ್ತಾನ ನಾಯಕರು. ಭ್ರಷ್ಟಾಚಾರ, ವಂಶಪಾರಂಪರ‍್ಯ, ತುಷ್ಟೀಕರಣದ ರಾಜಕಾರಣದ ಪರ ನಿಲ್ಲುವವರು ಎಂದು ತರಾಟೆ ತೆಗೆದುಕೊಂಡರು.

ಬಡವರು, ದಲಿತರು, ಹಿಂದುಳಿದವರು ಹಾಗೂ ಶ್ರೀಸಾಮಾನ್ಯರು ಮೋದಿ ಅವರನ್ನು ಬೆಂಬಲಿಸುತ್ತಾರೆ. ಹೀಗಾಗಿ ಅವರನ್ನು ಯಾರೂ ಅಧಿಕಾರದಿಂದ ಕೆಳಗಿಳಿಸಲಾಗದು ಎಂದು ಹೇಳಿದರು.

Follow Us:
Download App:
  • android
  • ios