ಲಕ್ಕಸಂದ್ರ ವಾರ್ಡ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸರಳಾ ಮಹೇಶ್ ಬಾಬು ಗೆಲುವನ್ನ ಸಾಧಿಸಿದ್ದಾರೆ.
ಬೆಂಗಳೂರು (ನ.23): ಲಕ್ಕಸಂದ್ರ ವಾರ್ಡ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸರಳಾ ಮಹೇಶ್ ಬಾಬು ಗೆಲುವನ್ನ ಸಾಧಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಗಿಂತ 2414 ಮತಗಳ ಮುನ್ನಡೆಯನ್ನ ಸಾಧಿಸಿದ್ದಾರೆ. ಮೋಹನ್ 5224 ಮತಗಳನ್ನ ಪಡೆದಿದ್ದರೆ ಸರಳ ಮಹೇಶ್ ಬಾಬು 7638 ಮತಗಳ ಮೂಲಕ ಜಯಸಾಧಿಸಿದ್ದಾರೆ.
ಇತ್ತೀಚೆಗಷ್ಟೇ ಲಕ್ಕಸಂದ್ರ ವಾರ್ಡ್ನ ಕಾರ್ಪೊರೇಟರ್ ಮಹೇಶ್ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರಿಂದ ತೆರವಾದ ಸ್ಥಾನಕ್ಕೆ ಕಳೆದ 20 ರಂದು ಉಪಚುನಾವಣೆ ನಡೆಸಲಾಗಿತ್ತು. ಇಂದು ಆಡುಗೋಡಿಯ ಮುನಿಚಿನ್ನಪ್ಪ ಶಾಲೆಯಲ್ಲಿ ಮತ ಎಣಿಕೆ ನಡೆದಿದ್ದು, ಬಿಜೆಪಿಯ ಸರಳಾ ಮಹೇಶ್ ಗೆಲುವನ್ನ ಸಾಧಿಸಿದ್ದಾರೆ. ಸರಳಾ ಮಹೇಶ್ ಗೆಲುವಿಗೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದ್ದಾರೆ. ಇನ್ನೂ 4 ನೇ ಬಾರಿಯೂ ಕೂಡ ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಸೋಲನುಭವಿಸಿದ್ದು, ಮೋಹನ್ ಪರ ಪ್ರಚಾರ ಮಾಡಿದ ಸಚಿವ ರಾಮಲಿಂಗಾರೆಡ್ಡಿ ಲೆಕ್ಕ ಚಾರ ಉಲ್ಟಾ ಆಗಿದೆ.
