Asianet Suvarna News Asianet Suvarna News

ರಾಘವೇಂದ್ರ ನಾಮಪತ್ರ ಸಲ್ಲಿಕೆ: ರಂಗೇರಿದ ಶಿವಮೊಗ್ಗ ಉಪ ಚುನಾವಣಾ ಕಣ

ಶಿವಮೊಗ್ಗ ಉಪ ಚುನಾವಣಾ ಕಣ ರಂಗೇರಿದ್ದು, ಬಿಎಸ್ ವೈ ಪುತ್ರ ನಾಮಪತ್ರ ಸಲ್ಲಿಸುವ ಮೂಲಕ ಬಿಜೆಪಿ ಶಕ್ತಿ ಪ್ರದರ್ಶನ ಮಾಡಿತು. ಇದರ ವಿವರ ಇಲ್ಲಿದೆ.

BJP candidate BY Raghavendra Files nomination for Shivamogga Loksabha byelection
Author
Bengaluru, First Published Oct 15, 2018, 2:24 PM IST
  • Facebook
  • Twitter
  • Whatsapp

ಶಿವಮೊಗ್ಗ, (ಅ.15): ತೀವ್ರ ಕುತೂಹಲ ಕೆರಳಿಸಿರುವ ಶಿವಮೊಗ್ಗ ಲೋಕಸಭಾ ಉಪಚುನಾವಣೆಗೆ ಇಂದು [ಸೋಮವಾರ]  ಬಿ.ವೈ ರಾಘವೇಂದ್ರ ತಮ್ಮ ಉಮೇದುವಾರಿಕೆ ಸಲ್ಲಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ಯಡಿಯೂರಪ್ಪ ಅವರ ರಾಜೀನಾಮೆಯಿಂದ ಎದುರಾಗಿರುವ ಉಪಚುನಾವಣೆಗೆ ಪುತ್ರ ಬಿ.ವೈ ರಾಘವೇಂದ್ರ ಅವರು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ ಯಡಿಯೂರಪ್ಪ ಅವರು ಶಿಕಾರಿಪುರದಿಂದ ಸ್ಫರ್ಧಿಸಿ ಗೆಲುವು ಸಾಧಿಸಿದ್ದರು.

ಶಿವಮೊಗ್ಗದಲ್ಲಿ 3 ಮಾಜಿ ಸಿಎಂ ಪುತ್ರರ ಕದನ: ಗೆಲ್ಲೋರ್‍ಯಾರು..?

ಇದ್ರಿಂದ ಶಿವಮೊಗ್ಗ ಲೋಕಸಭಾ ಸ್ಥಾನ ತೆರವಾಗಿತ್ತು. ಇದೀಗ ಈ ಸ್ಥಾನಕ್ಕೆ ಬಿಎಸ್ ವೈ ಪುತ್ರ ರಾಘವೇಂದ್ರ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಬಿ.ಎಸ್​ ಯಡಿಯೂ ರಪ್ಪ, ಕ್ಷೇತ್ರ ಉಸ್ತುವಾರಿ ಕೆ.ಎಸ್.ಈಶ್ವರಪ್ಪ, ಶಾಸಕ ಹರತಾಳು ಹಾಲಪ್ಪ, ಎಂ.ಬಿ.ಭಾನುಪ್ರಕಾಶ್, ರಾಘವೇಂದ್ರ ಪತ್ನಿ ತೇಜಸ್ವಿನಿ ಸೇರಿದಂತೆ ಕುಟುಂಬ ಸದಸ್ಯರು ಇದ್ದರು.

ನಾಮಪತ್ರ ಸಲ್ಲಿಕೆಗೂ ಮೊದಲು ಬಿಎಸ್​ವೈ ಕುಟುಂಬಸ್ಥರು ಟೆಂಪಲ್​ ರನ್​ ನಡೆಸಿದರು. ಕುಟುಂಬಸ್ಥರು ರಾಘವೇಂದ್ರ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಇದಕ್ಕೂ ಮೊದಲು ರಾಘವೇಂದ್ರ ಅವರು ಪತ್ನಿ ಸಹಿತ ಈಶ್ವರನ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸದರು. ನಂತರ ರವೀಂದ್ರ ನಗರದ ಗಣಪತಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿದರು.

ನಾಮಪತ್ರ ಸಲ್ಲಿಕೆ ಬಳಿಕ ಶಿವಮೊಗ್ಗದ ರಾಮಣ್ಣ ಶ್ರೇಷ್ಟಿ ಪಾರ್ಕ್ ನಿಂದ ಬಿಜೆಪಿ ಮೆರವಣಿಗೆ‌ ನಡೆಸಿ ಶಕ್ತಿ ಪ್ರದರ್ಶನ ಮಾಡಿತು. ಮೆರವಣಿಗೆಯಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು. 

ನಾಳೆ ಅಂದರೆ ಮಂಗಳವಾರ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, ಇದೇ ನವೆಂಬರ್ 03ರಂದು ಮತದಾನ ನಡೆಯಲಿದೆ. ಇನ್ನು ಇದರ ಫಲಿತಾಂಶ ನವೆಂಬರ್ 6ರಂದು ಹೊರಬೀಳಲಿದೆ.

Follow Us:
Download App:
  • android
  • ios