ನವದೆಹಲಿ[ಡಿ.10] ‘ವಿಶ್ವದ ಅತಿ ಎತ್ತರದ ಪ್ರತಿಮೆ ನಿರ್ಮಾಣ ಮಾಡಲು ಸಾಧ್ಯವಿದೆ, ಆದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ನಿಮ್ಮ ಬಳಿ  ಯಾಕೆ ಸಾಧ್ಯವಾಗುತ್ತಿಲ್ಲ’ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಉಮರ್ ಅಬ್ದುಲ್ಲಾ ಬಿಜೆಪಿಗೆ ಟಾಂಗ್ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ  ಮಾತನಾಡಿದ ನ್ಯಾಶನಲ್ ಕಾನ್ಫರೆನ್ಸ್ ಮುಖಂಡ, ಯಾವಾಗಾ ಬಿಜೆಪಿ ಸೋಲು ಕಾಣುತ್ತದೆಯೋ ಆವಾಗೆಲ್ಲ ಇವರಿಗೆ ರಾಮ ಮಂದಿರದ ನೆನಪಾಗುತ್ತದೆ. ಮಂದಿರದ ವಿಚಾರವನ್ನು ಪ್ರಚಾರಕ್ಕೆಂದು ಮತ್ತೆ ಬಳಕೆ ಮಾಡಿಕೊಳ್ಳುತ್ತಾರೆ. ಗೆದ್ದರೆ ವಿಚಾರ ಅಲ್ಲಿಗೆ ಮುಗಿಯುತ್ತದೆ ಎಂದು ಟೀಕಾ ಪ್ರಹಾರ ಮಾಡಿದ್ದಾರೆ.

ವಾವ್...! ಬಾಹ್ಯಾಕಾಶದಿಂದ ಹೀಗೆ ಕಾಣುತ್ತೆ ಪಟೇಲರ 'ಏಕತಾ ಪ್ರತಿಮೆ'!

ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನು ನರೇಂದ್ರ ಮೋದಿ ನವೆಂಬರ್‌ನಲ್ಲಿ ಲೋಕಾರ್ಪಣೆ ಮಾಡಿದ್ದರು. ರಾಮಮಂದಿರ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿಗೆ ಮುಂದೂಡಿದೆ. ಆದರೆ ಅಯೋಧ್ಯೆ ವಿಚಾರ ಆಗಾಗ ರಾಜಕಾರಣಿಗಳ ಮಾತಿನಲ್ಲಿ ಪ್ರತಿಧ್ವನಿಸುತ್ತಲೇ ಇದೆ.