ಎಲ್ಲರನ್ನೂ ಹಿಂದಕ್ಕಿ ಇದೀಗ ಬಿಜೆಪಿ ನಂಬರ್ 1 ಸ್ಥಾನವನ್ನು ಪಡೆದುಕೊಂಡಿದೆ. ರಾಜಕೀಯ ಪಕ್ಷಗಳ ಪ್ರಚಾರ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಆದರೆ, ಟೀವಿ ಜಾಹೀರಾತು ನೀಡುವುದರಲ್ಲಿ ಬಿಜೆಪಿ ಎಲ್ಲಾ ಕಾರ್ಪೊರೇಟ್ ಸಂಸ್ಥೆಗಳನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಏರಿದೆ.
ನವದೆಹಲಿ: ಪಂಚರಾಜ್ಯ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಪ್ರಚಾರ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಆದರೆ, ಟೀವಿ ಜಾಹೀರಾತು ನೀಡುವುದರಲ್ಲಿ ಬಿಜೆಪಿ ಎಲ್ಲಾ ಕಾರ್ಪೊರೇಟ್ ಸಂಸ್ಥೆಗಳನ್ನು ಹಿಂದಿಕ್ಕಿ ನಂ.1 ಸ್ಥಾನ ಪಡೆದುಕೊಂಡಿದೆ.
ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ನ.16ರಂದು ಕೊನೆಗೊಂಡ ವಾರಾಂತ್ಯಕ್ಕೂ ಮುನ್ನ ಮುಂಚೂಣಿಯಲ್ಲಿದ್ದ ವಿಮಲ್ ಪಾನ್ ಮಸಾಲಾ ಜಾಹೀರಾತನ್ನು ಹಿಂದಿಕ್ಕಿ ಬಿಜೆಪಿ ಮೊದಲ ಸ್ಥಾನದಲ್ಲಿದೆ.
ನಂತರದ ಸ್ಥಾನದಲ್ಲಿ ನೆಟ್ ಫ್ಲಿಕ್ಸ್, ಟ್ರಿವಾಗೋ ವೆಬ್‌ಸೈಟ್ ಜಾಹೀರಾತು ಗಳು ನಂತರದ ಸ್ಥಾನ ಪಡೆದುಕೊಂಡಿವೆ.
