Asianet Suvarna News Asianet Suvarna News

ಆಪರೇಷನ್​ ಕಮಲ, ಹೊಸ ಬಾಂಬ್ ಸಿಡಿಸಿದ ಕಾಂಗ್ರೆಸ್ ಶಾಸಕ!

ಜಾರಕಿಹೊಳಿ ಬ್ರದರ್ಸ್​​ ಕಾಂಗ್ರೆಸ್​​ ಮೇಲೆ ಮುನಿಸಿಕೊಂಡಿದ್ದನ್ನೇ ದಾಳವಾಗಿ ಬಳಿಸಿಕೊಳ್ಳಲು ಮುಂದಾದ ಬಿಜೆಪಿ, ಆಪರೇಷನ್​ ಕಮಲಕ್ಕೆ ಮುಂದಾಗಿದೆ ಎಂಬ ಗುಮಾನಿಯೂ ಹಬ್ಬಿದೆ. ಈ ಎಲ್ಲ ಬೆಳವಣಿಗೆಗಳು ಕಾಂಗ್ರೆಸ್​​ ನಾಯಕರಲ್ಲಿ ಆಪರೇಷನ್​ ಕಮಲದ ಭೀತಿ ಹುಟ್ಟಿಸಿದೆ. 

BJP Approached Me To Join BJP Says  MLA Anil Chikkamadu
Author
Mysuru, First Published Sep 16, 2018, 1:51 PM IST

ಮೈಸೂರು, (ಸೆ.16): ಬೆಳಗಾವಿ ಪಿಎಲ್​ಡಿ ಬ್ಯಾಂಕ್​ ಚುನಾವಣೆ ಬಳಿಕ ಜಾರಕಿಹೊಳಿ ಬ್ರದರ್ಸ್ ಮುನಿಸಿಕೊಂಡಿದ್ದು, ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬೆಳವಣಿಗೆಗಳಿಗೆ ಕಾರಣವಾಗಿದೆ. 

ಜಾರಕಿಹೊಳಿ ಬ್ರದರ್ಸ್​​ ಕಾಂಗ್ರೆಸ್​​ ಮೇಲೆ ಮುನಿಸಿಕೊಂಡಿದ್ದನ್ನೇ ದಾಳವಾಗಿ ಬಳಿಸಿಕೊಳ್ಳಲು ಮುಂದಾದ ಬಿಜೆಪಿ, ಆಪರೇಷನ್​ ಕಮಲಕ್ಕೆ ಮುಂದಾಗಿದೆ ಎಂಬ ಗುಮಾನಿಯೂ ಹಬ್ಬಿದೆ. ಈ ಎಲ್ಲ ಬೆಳವಣಿಗೆಗಳು ಕಾಂಗ್ರೆಸ್​​ ನಾಯಕರಲ್ಲಿ ಆಪರೇಷನ್​ ಕಮಲದ ಭೀತಿ ಹುಟ್ಟಿಸಿದೆ.

ಇದಕ್ಕೆ ಪೂರಕವೆಂಬಂತೆ ಬಿಜೆಪಿಯವರು ಕಾಂಗ್ರೆಸ್ ಎಚ್.ಡಿ. ಕೋಟೆ ಕ್ಷೇತ್ರದ ಕಾಂಗ್ರೆಸ್​ ಶಾಸಕ ಅನಿಲ್​ ಚಿಕ್ಕಮಾದು ಅವರನ್ನ ಸೆಳೆಯಲು ಮುಂದಾಗಿದ್ದಾರೆ. ಹೀಗಂತ ಬಗ್ಗೆ ಸ್ವತಃ ಚಿಕ್ಕಮಾದು ಅವರೇ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿಕ್ಕಮಾದು, ಬಿಜೆಪಿ ಪಕ್ಷಕ್ಕೆ ಸೇರುವಂತೆ ನನಗೆ ಆಫರ್​ ಬಂದಿದ್ದು ನಿಜ, ಸಿ.ಪಿ. ಯೋಗೇಶ್ವರ್​ ಅವರೇ ನನಗೆ ಆಹ್ವಾನ ನೀಡಿದ್ದರು ಎಂದು ಎಚ್.ಡಿ. ಕೋಟೆ ಕ್ಷೇತ್ರದ ಕಾಂಗ್ರೆಸ್​ ಶಾಸಕ ಅನಿಲ್​ ಚಿಕ್ಕಮಾದು ಆರೋಪಿಸಿದ್ದಾರೆ.

 ಆಪರೇಷನ್​ ಕಮಲದಲ್ಲಿ ಸಿ.ಪಿ. ಯೋಗೇಶ್ವರ್​ ಸಕ್ರಿಯರಾಗಿದ್ದಾರೆ. ನಿಮ್ಮ ಕ್ಷೇತ್ರದ ಕೆಲಸ ಮಾಡಿಕೊಡುತ್ತೇವೆ ಎಂದು ಆಮಿಷವೊಡ್ಡಿದ್ದರು. ಜತೆಗೆ ಅವರು ನನಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದಿದ್ದರು. ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್​ ನೀಡುವ ಆಫರ್​ ನೀಡಿದ್ದರು ಎಂದು ಆರೋಪ ಮಾಡಿದರು.

ನಾನು ಕಷ್ಟದಲ್ಲಿದ್ದಾಗ ನನ್ನನ್ನು ಗುರುತಿಸಿ ಅವಕಾಶ ಕೊಟ್ಟಿದ್ದು ಕಾಂಗ್ರೆಸ್​ ಪಕ್ಷ. ಹಾಗಾಗಿ ನಾನು ಬಿಜೆಪಿ ಸೇರ್ಪಡೆಯಾಗುತ್ತೇನೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಅನಿಲ್​ ಚಿಕ್ಕಮಾದು ಸ್ಪಷ್ಟಪಡಿಸಿದ್ದಾರೆ.
 

Follow Us:
Download App:
  • android
  • ios