ಮಣಿಪುರದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ.  ನಾಂಗ್ತೋಂಭಮ್ ಬೀರೆನ್ ಸಿಂಗ್ ರನ್ನು ಮುಖ್ಯಮಂತ್ರಿ ಮಾಡುವುದಾಗಿ ಪಕ್ಷ ಘೋಷಿಸಿದೆ.

ಇಂಫಾಲ್ (ಮಾ.13): ಮಣಿಪುರದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. ನಾಂಗ್ತೋಂಭಮ್ ಬೀರೆನ್ ಸಿಂಗ್ ರನ್ನು ಮುಖ್ಯಮಂತ್ರಿ ಮಾಡುವುದಾಗಿ ಪಕ್ಷ ಘೋಷಿಸಿದೆ. 

ಇದೊಂದು ದೊಡ್ಡ ಸವಾಲಾಗಿದೆ. ಹೊಸ ಬದಲಾವಣೆಗೆ ಜನರು ಆದೇಶಿಸಿದ್ದಾರೆ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ನಾವು ಉತ್ತಮ ಆಡಳಿತವನ್ನು ನೀಡುತ್ತೇವೆಂದು ಬೀರೆನ್ ಸಿಂಗ್ ಭರವಸೆ ನೀಡಿದರು.

ಬೀರೆನ್ ಸಿಂಗ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಶೀಘ್ರದಲ್ಲಿಯೇ ಸರ್ಕಾರ ರಚನೆ ಮಾಡುವುದಾಗಿ ಕೇಂದ್ರ ಸಚಿವ ಪಿಯೂಶ್ ಘೋಯಲ್ ಹೇಳಿದ್ದಾರೆ.