ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಹೊಸ ಅಸ್ತ್ರ ಪ್ರಯೋಗಿಸಿದೆ. ಅವಿರೋಧವಾಗಿ ಆಯ್ಕೆ ಮಾಡುವುದಾಗಿ ಮಾತು ಕೊಟ್ಟಿದ್ದ ಯಡಿಯೂರಪ್ಪ ಈಗ ಮಾನಸಿಕ ಹಿಂಸೆ ಕೊಡಿಸುತ್ತಿದ್ದಾರೆ ಅಂತ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ಕಣ್ಣೀರಿಟ್ಟಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿ ಆರೋಪವನ್ನ ಬಿಜೆಪಿ ರಾಜ್ಯಾಧ್ಯಕ್ಷರು ತಳ್ಳಿ ಹಾಕಿದ್ದಾರೆ.
ಮೈಸೂರು(ಮಾ.29): ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಹೊಸ ಅಸ್ತ್ರ ಪ್ರಯೋಗಿಸಿದೆ. ಅವಿರೋಧವಾಗಿ ಆಯ್ಕೆ ಮಾಡುವುದಾಗಿ ಮಾತು ಕೊಟ್ಟಿದ್ದ ಯಡಿಯೂರಪ್ಪ ಈಗ ಮಾನಸಿಕ ಹಿಂಸೆ ಕೊಡಿಸುತ್ತಿದ್ದಾರೆ ಅಂತ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ಕಣ್ಣೀರಿಟ್ಟಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿ ಆರೋಪವನ್ನ ಬಿಜೆಪಿ ರಾಜ್ಯಾಧ್ಯಕ್ಷರು ತಳ್ಳಿ ಹಾಕಿದ್ದಾರೆ.
ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಅನುಕಂಪದ ಅಲೆಯನ್ನೇ ನೆಚ್ಚಿಕೊಂಡಿದ್ದ ಕಾಂಗ್ರೆಸ್ ಅದನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳಲು ಮುಂದಾಗಿದೆ. ಬಿಜೆಪಿ ವಿರುದ್ದ ವಚನ ಭ್ರಷ್ಟತೆಯ ಆರೋಪ ಹೊರಿಸಿರುವ ಕಾಂಗ್ರೆಸ್, ಬಿಜೆಪಿ ನಾಯಕರು ಕಾಂಗ್ರೆಸ್ ಅಭ್ಯರ್ಥಿಗೆ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ ಅಂತ ಆಪಾದಿಸಿದೆ. ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡುವುದಾಗಿ ಬಿಎಸ್ವೈ ಮಾತು ಕೊಟ್ಟಿದ್ದರು. ಈಗ ಅಭ್ಯರ್ಥಿ ಹಾಕಿ ಪ್ರತೀ ದಿನ ವೈಯಕ್ತಿಕ ಟೀಕೆ ಮೂಲಕ ಹಿಂಸೆ ನೀಡುತ್ತಿದ್ದಾರೆ ಅಂತ ಗೀತಾ ಮಹದೇವ ಪ್ರಸಾದ್ ಸಾರ್ವಜನಿಕವಾಗಿಯೇ ಕಣ್ಣೀರಿಟ್ಟಿದ್ದಾರೆ.
ಇನ್ನು ಗೀತಾ ಮಹದೇವಪ್ರಸಾದ್ ಆರೋಪವನ್ನು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಾರಸಗಟಾಗಿ ತಳ್ಳಿಹಾಕಿದ್ದಾರೆ. ಈ ಮಧ್ಯೆ ಸುವರ್ಣ ನ್ಯೂಸ್ ಜೊತೆ ಮಾತಾಡಿದ ದಿ. ಮಹದೇವಪ್ರಸಾದ್ ಪುತ್ರ ಗಣೇಶ್ ಪ್ರಸಾದ್, ಜನ ಬಯಸಿದರೆ ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವೆ ಅಂತ ಹೇಳಿದ್ದಾರೆ.
ಒಟ್ಟಾರೆ, ಏಕಪಕ್ಷೀಯವಾಗಿ ಸಾಗುತ್ತದೆ ಅಂತ ನಿರೀಕ್ಷಿಸಲಾಗಿದ್ದ ಗುಂಡ್ಲುಪೇಟೆ ಉಪಚುನಾವಣಾ ಕಣ ಈಗ ಬಿರುಸಿನ ಕಾದಾಟಕ್ಕೆ ಸಿದ್ಧಗೊಳ್ಳುತ್ತಿದೆ.
ವರದಿ: ಕಿರಣ್ ಹನಿಯಡ್ಕ, ಸುವರ್ಣ ನ್ಯೂಸ್.
