Asianet Suvarna News Asianet Suvarna News

ಬಿಜೆಪಿ ಕಾರ್ಯಕರ್ತ ಹುಸೇನ್ ಮೇಲೆ ಮಾರಣಾಂತಿಕ ಹಲ್ಲೆ

ಏಪ್ರಿಲ್ 26ರಂದು ಥಣಿಸಂದ್ರ ಕಾಂಗ್ರೆಸ್ ಮುಖಂಡ ಸ್ಟಾರ್ ಹುಸೇನ್ ಎಂಬುವರು ಹುಸೇನ್'ನನ್ನು ತಮ್ಮ ಕಚೇರಿಗೆ ಕರೆಸಿ ಬಿಜೆಪಿ ಕಚೇರಿ ತೆರೆಯದಂತೆ ಕೊಲೆ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ಸ್ಟಾರ್ ಹುಸೇನ್ ಹಾಗೂ ಪಳನಿ ಎಂಬುವರು ಮೊಬೈಲ್ ಮುಖಾಂತರ ಪ್ರಾಣ ಬೆದರಿಕೆ ಹಾಕಿರುವುದಾಗಿ ಹುಸೇನ್ ಸಂಬಂಧಿಕರು ಆರೋಪ ಮಾಡಿದ್ದಾರೆ.  

bjp activist hussain assaulted in bengaluru
  • Facebook
  • Twitter
  • Whatsapp

ಬೆಂಗಳೂರು: ಥಣಿಸಂದ್ರ ವಾರ್ಡ್​'ನ ಬಿಜೆಪಿ ಕಾರ್ಯಕರ್ತ ಹುಸೇನ್ ಎಂಬುವನಿಗೆ ಮಾರಣಾಂತಿಕವಾಗಿ ಚಾಕುವಿನಿಂದ ಇರಿಯಲಾಗಿದೆ. ನಿನ್ನೆ ರಾತ್ರಿ ದ್ವಿಚಕ್ರ ವಾಹನವೊಂದರಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಥಣಿಸಂದ್ರದಲ್ಲಿರುವ ಬಿಜೆಪಿ ಕಚೇರಿ ಬಳಿ ಹುಸೇನ್ ಜೊತೆ ಮಾತುಕತೆಗೆ ಇಳಿದಿದ್ದಾರೆ. ಮಾತುಕತೆ ವೇಳೆ ದುಷ್ಕರ್ಮಿಗಳು ಏಕಾಏಕಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಹಲ್ಲೆಯಿಂದ ತೀವ್ರ ಗಾಯಗೊಂಡ ಹುಸೇನ್ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆಯ ಬಗ್ಗೆ ಗಾಯಾಳು ಹುಸೇನ್'ನ ಸಂಬಂಧಿಕರು ಹೇಳೋದೇ ಬೇರೆ. ಏಪ್ರಿಲ್ 26ರಂದು ಥಣಿಸಂದ್ರ ಕಾಂಗ್ರೆಸ್ ಮುಖಂಡ ಸ್ಟಾರ್ ಹುಸೇನ್ ಎಂಬುವರು ಹುಸೇನ್'ನನ್ನು ತಮ್ಮ ಕಚೇರಿಗೆ ಕರೆಸಿ ಬಿಜೆಪಿ ಕಚೇರಿ ತೆರೆಯದಂತೆ ಕೊಲೆ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ಸ್ಟಾರ್ ಹುಸೇನ್ ಹಾಗೂ ಪಳನಿ ಎಂಬುವರು ಮೊಬೈಲ್ ಮುಖಾಂತರ ಪ್ರಾಣ ಬೆದರಿಕೆ ಹಾಕಿರುವುದಾಗಿ ಹುಸೇನ್ ಸಂಬಂಧಿಕರು ಆರೋಪ ಮಾಡಿದ್ದಾರೆ.  

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಸಂಪಿಗೆಹಳ್ಳಿ ಪೋಲಿಸರು, ಸ್ಥಳದಲ್ಲಿದ್ದ ಸಿಸಿಟಿವಿ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Follow Us:
Download App:
  • android
  • ios