ನವದೆಹಲಿ(ಜು.16): ಮಹತ್ವದ ಬೆಳವಣಿಗೆಯೊಂದರಲ್ಲಿ ಆಂಧ್ರ ಪ್ರದೇಶ ನೂತನ ರಾಜ್ಯಪಾಲರಾಗಿ ಬಿಸ್ವ ಭೂಷಣ್ ಹರಿಚಂದನ್ ಅವರನ್ನು ನೇಮಕ ಮಾಡಲಾಗಿದೆ.

ಈ ಕುರಿತು ರಾಷ್ಟ್ರಪತಿ ಭವನ ಆದೇಶ ಹೊರಡಿಸಿದ್ದು, ಇದೇ ವೇಳೆ ಛತ್ತೀಸ್ ಗಢ ರಾಜ್ಯಪಾಲರಾಗಿ ಸುಶ್ರೀ ಅನುಸುಯಾ ಯುಕೇ ಅವರನ್ನು ನೇಮಕ ಮಾಡಲಾಗಿದೆ.

ಒಡಿಶಾದ ಹಿರಿಯ ಬಿಜೆಪಿ ನಾಯಕರಗಿರುವ ಸ್ವ ಭೂಷಣ್ ಹರಿಚಂದನ್, 1980ರಿಂದ 1988ರ ವರೆಗೆ ಒಡಿಶಾ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.