ಬೆಂಗಳೂರು (ಮಾ. 09): ಎಡಪಂಥೀಯರ ಅಬೇಧ್ಯ ಕೋಟೆ ಎನಿಸಿಕೊಂಡಿರುವ ತ್ರಿಪುರಾದಲ್ಲಿ ಬಿಜೆಪಿ ತಂತ್ರಗಾರಿಕೆಯಿಂದ ಕಮಲ ಅರಳಿದೆ. 

ಇಂದು ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಬಿಪ್ಲಬ್ ದೇಬ್ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದಾರೆ. ಜಿಷ್ಣು ದೆಬ್ಬಾರ್ಮಾ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. 

ತ್ರಿಪುರಾದಲ್ಲಿ ಕಳೆದ 25 ವರ್ಷಗಳಿಂದ ಮಾಣಿಕ್ ಸರ್ಕಾರದ ಆಡಳಿತವಿತ್ತು. ಅಂದರೆ 4 ಬಾರಿ ಮಾಣಿಕ್ ಸರ್ಕಾರ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಎಡಪಂಥೀಯರ ಭದ್ರಕೋಟೆ ಎಂದೆ ತ್ರಿಪುರಾವನ್ನು ಕರೆಯಲಾಗುತ್ತಿತ್ತು. ಅಲ್ಲಿ ಬಿಜೆಪಿಗೆ ಕಮಲ ಅರಳಿಸುವುದು ಸವಾಲಾಗಿತ್ತು. ಸೂಕ್ತ ರಾಜಕೀಯ ತಂತ್ರಗಾರಿಗೆ, ಹೈವೋಲ್ಟೇಜ್ ಪ್ರಚಾರ, ಎಡ ಪಂಥೀಯರ ಸೈದ್ಧಾಂತಿಕ ವಿಚಾರದಿಂದ ಬೇಸತ್ತ ಜನ ಬಿಜೆಪಿ ಕಡೆ ವಾಲಿದ್ದು ಇವೆಲ್ಲಾ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿ ಈ ಬಾರಿ ಚುನಾವಣೆಯಲ್ಲಿ ಐಪಿಎಫ್’ಟಿ ಮೈತ್ರಿಯಿಂದ 43 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.