ನ್ಯೂಯಾರ್ಕ್(ನ.28): ನಗರ ಪ್ರದೇಶಗಳಿಗೆ ವಲಸೆ ಹೆಚ್ಚುತ್ತಲೇ ಇರುವ ಹಿನ್ನೆಲೆಯಲ್ಲಿ ಮೈಕ್ರೋಸಾಫ್ಟ್ ಕಂಪನಿಯ ಸಂಸ್ಥಾಪಕ, ವಿಶ್ವದ ನಂ.2 ಶ್ರೀಮಂತ ಬಿಲ್ ಗೇಟ್ಸ್ ಅಮೆರಿಕದ ಅರಿಜೋನಾ ಮರುಭೂಮಿಯಲ್ಲಿ ಸ್ಮಾರ್ಟ್‌'ಸಿಟಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ 25 ಸಾವಿರ ಎಕರೆ ಜಮೀನು ಖರೀದಿಸಿರುವ ಅವರು, 516  ಕೋಟಿ ರು. ಬಂಡವಾಳ ತೊಡಗಿಸಲು ಉದ್ದೇಶಿಸಿದ್ದಾರೆ.

ಬೆಲ್ಮಂಟ್ ಪಾರ್ಟ್‌'ನರ್ಸ್‌ ಎಂಬ ತಮ್ಮ ಕಂಪನಿಯ ಮೂಲಕ ಬಿಲ್‌'ಗೇಟ್ಸ್ ಹೂಡಿಕೆಗೆ ನಿರ್ಧರಿಸಿದ್ದಾರೆ. ಈ ಸ್ಮಾರ್ಟ್ ಸಿಟಿಯಲ್ಲಿ ಮನೆಗಳು, ಶಾಲೆ, ಅಂಗಡಿಗಳು ಸೇರಿ ಎಲ್ಲ ಸೌಲಭ್ಯವೂ ಇರಲಿವೆ. 80 ಸಾವಿರ ಮನೆಗಳು ಹಾಗೂ 1.82 ಲಕ್ಷ ಜನಸಂಖ್ಯೆಗೆ ಆತಿಥ್ಯ ವಹಿಸುವ ಉದ್ದೇಶವಿದೆ.

25 ಸಾವಿರ ಎಕರೆ ಜಾಗವನ್ನು ಕಚೇರಿ, ವಾಣಿಜ್ಯ, ಚಿಲ್ಲರೆ ವಹಿವಾಟು ಮತ್ತು 470 ಎಕರೆಯನ್ನು ಸಾರ್ವಜನಿಕ ಶಾಲೆಗಳಿಗೆ ಮೀಸಲಿಡಲಾಗುತ್ತದೆ. ಸ್ವಯಂಚಾಲಿತ ಕಾರುಗಳು, ಒಂದರ ಜತೆ ಪರಸ್ಪರ ಸಂಪರ್ಕ ಸಾಧಿಸಿ, ಸಂಚಾರ ದಟ್ಟಣೆ ಕಡಿಮೆಗೊಳಿಸುವ ಟ್ರಾಫಿಕ್ ಸಿಗ್ನಲ್'ಗಳು, ಹೈಸ್ಪೀಡರ್ ಇಂಟರ್ನೆಟ್ ಸಹಿತ ವಾತಾವರಣವನ್ನು ಒದಗಿಸಲಾಗುತ್ತದೆ.