ಒಂದೇ ವರ್ಷದಲ್ಲಿ 12 ಮಕ್ಕಳನ್ನ ಹೆತ್ತಿದ್ದು, 14 ಬಾರಿ ಟ್ಯುಬೋಕ್ಟಮಿ(ಮಕ್ಕಳಾಗದಂತೆ ಶಸ್ತ್ರಚಿಕಿತ್ಸೆ) ಮಾಡಿಸಿಕೊಂಡಿದ್ದಾರೆ

ಪಾಟ್ನಾ(ಸೆ.10): ಯಾರಾದರೂ ಒಂದು ವರ್ಷಕ್ಕೆ ಮಕ್ಕಳನ್ನ ಹೆರಲು ಸಾಧ್ಯವೇ..? ವಾಸ್ತವದಲ್ಲಿ ಸಾಧ್ಯವಲ್ಲದಿದ್ದರೂ ಬಿಹಾರದ ದಾಖಲೆಗಳಲ್ಲಿ ಇದು ಸಾಧ್ಯವಾಗಿದೆ. ಪಾಟ್ನಾದಿಂದ 200 ಕಿ.ಮೀ ದೂರದ ಕೈಮೂರನಲ್ಲಿ ನಡೆದಿರುವ ನ್ಯಾಶನಲ್ ರೂರಲ್ ಹೆಲ್ತ್ ಮಿಶನ್ ಯೋಜನೆಯ ಹಗರಣದ ಸತ್ಯ ದರ್ಶನವಿದು. ತನಿಖೆ ವೇಳೆ ಈ ಸತ್ಯ ಬಹಿರಂಗವಾಗಿದೆ.

29 ವರ್ಷದ ಮೀರಾದೇವಿ ಎಂಬ ಮಹಿಳೆ ಒಂದೇ ವರ್ಷದಲ್ಲಿ 12 ಮಕ್ಕಳನ್ನ ಹೆತ್ತಿದ್ದು, 14 ಬಾರಿ ಟ್ಯುಬೋಕ್ಟಮಿ(ಮಕ್ಕಳಾಗದಂತೆ ಶಸ್ತ್ರಚಿಕಿತ್ಸೆ) ಮಾಡಿಸಿಕೊಂಡಿದ್ದಾರೆಂದು ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. ಬೀಹಾರದಲ್ಲಿ ಇದನ್ನ ವೂಂಬ್ ಸ್ಕ್ಯಾಮ್ ಎಂತಲೇ ಕರೆಯಲಾಗುತ್ತಿದೆ.