ಪಟ್ನಾ (ಜ. 29): ಜನಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡುವುದಿಲ್ಲ ಎಂಬ ದೂರು ಸಾಮಾನ್ಯ. ಅಂಥದ್ದರಲ್ಲಿ ಬಿಹಾರದ ಶಾಸಕನೊಬ್ಬ ತಾನು ವಿಮಾನದಲ್ಲಿ ಪುಕ್ಕಟೆಯಾಗಿ ಹಾರಾಟ ಮಾಡುವುದಕ್ಕಾಗಿ ಸಂಸತ್ತಿಗೆ ಆಯ್ಕೆ ಆಗಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾನೆ.

ಪಟನಾದಲ್ಲಿ ಕಾರ‌್ಯಕ್ರಮವೊಂದರಲ್ಲಿ ಮಾತನಾಡಿದ ಮೊಕಮಾ ಕ್ಷೇತ್ರದ ಶಾಸಕ ಅನಂತ್ ಸಿಂಗ್ ತಾನು ಲೋಕಸಭೆ ಚುನಾವಣೆಯಲ್ಲಿ ಮುನ್ಗರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿಕೊಂಡಿದ್ದಾನೆ. ಇದಕ್ಕೆ ಕಾರಣವನ್ನೂ ನೀಡಿರುವ ಆತ, ಸಂಸದನಾದರೆ ದೆಹಲಿಗೆ ವಿಮಾನದಲ್ಲಿ ಯಾವಾಗ ಬೇಕಾದರೂ ಹಾರಾಟ ನಡೆಸಬಹುದು.

ತನಗೆ ವಿಮಾನದಲ್ಲಿ ಹಾರಾಡುವುದೆಂದರೆ ಇಷ್ಟ. ಒಂದು ವೇಳೆ ತನ್ನನ್ನು ಜೈಲಿಗೆ ಕಳುಹಿಸಿದರೂ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದಿದ್ದಾನೆ.