ಮದ್ಯ ಆಯ್ತು ಈಗ ಗುಟ್ಕಾ ನಿಷೇಧ..?

news | Saturday, June 9th, 2018
Suvarna Web Desk
Highlights

ಎರಡು ವರ್ಷಗಳ ಹಿಂದೆ ಮದ್ಯಪಾನ ನಿಷೇಧ ಜಾರಿಗೆ ತಂದಿದ್ದ ಬಿಹಾರದ ನಿತೀಶ್ ಕುಮಾರ್ ಸರ್ಕಾರ ಇದೀಗ, ಖೈನಿ (ಗುಟ್ಕಾ) ಮಾರಾಟದ ಮೇಲೆ ನಿಷೇಧ ಹೇರಲು ಮುಂದಾಗಿದೆ.

ಪಾಟನಾ: ಎರಡು ವರ್ಷಗಳ ಹಿಂದೆ ಮದ್ಯಪಾನ ನಿಷೇಧ ಜಾರಿಗೆ ತಂದಿದ್ದ ಬಿಹಾರದ ನಿತೀಶ್ ಕುಮಾರ್ ಸರ್ಕಾರ ಇದೀಗ, ಖೈನಿ (ಗುಟ್ಕಾ) ಮಾರಾಟದ ಮೇಲೆ ನಿಷೇಧ ಹೇರಲು ಮುಂದಾಗಿದೆ. ಈ ಸಂಬಂಧ ಬಿಹಾರ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದ್ದು, ಖೈನಿಯನ್ನು ಆಹಾರ ಉತ್ಪನ್ನವಾಗಿ ಅಧಿಸೂಚನೆ ಹೊರಡಿಸುವಂತೆ ಮನವಿ ಮಾಡಿಕೊಂಡಿದೆ.

ಒಂದು ವೇಳೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಖೈನಿಯನ್ನು ಆಹಾರ ಉತ್ಪನ್ನ ಎಂದು ಪರಿಗಣಿಸಿದರೆ, ಆರೋಗ್ಯಕ್ಕೆ ಹಾನಿಕಾರಕ ಎಂಬ ಕಾರಣಕ್ಕೆ ಅವುಗಳ ಮೇಲೆ ನಿಷೇಧ ಹೇರುವ ಅಧಿಕಾರ ಸರ್ಕಾರಕ್ಕೆ ಲಭಿಸಲಿದೆ. 

Comments 0
Add Comment

  Related Posts

  Anil Kumble Wife PAN Card Misused

  video | Saturday, March 31st, 2018

  How to link Aadhar, PAN with LIC Polilcy

  video | Thursday, February 15th, 2018

  Anil Kumble Wife PAN Card Misused

  video | Saturday, March 31st, 2018
  Sujatha NR