ರಾಷ್ಟ್ರಪತಿ ಸ್ಥಾನ ಅಲಂಕರಿಸಿದ ಕೋವಿಂದ್ ಅವರಿಂದ ತೆರವಾದ ಬಿಹಾರ ರಾಜ್ಯಪಾಲ ಜವಾಬ್ದಾರಿಯನ್ನು ಪಶ್ಚಿಮ ಬಂಗಾಳ ಗವರ್ನರ್ ಆಗಿರುವ ತ್ರಿಪಾಠಿ ಹೆಚ್ಚುವರಿಯಾಗಿ ನಿರ್ವಹಿಸುತ್ತಿದ್ದಾರೆ.
ಪಟನಾ(ಜು.27): ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ಅವರು ದಿಢೀರ್ ರಾಜೀನಾಮೆ ಬಳಿಕ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ಕ್ಷಿಪ್ರ ತಿರುವು ಪಡೆದ ಬೆನ್ನಲ್ಲೇ, ಬಿಹಾರದ ಹೆಚ್ಚುವರಿ ರಾಜ್ಯಪಾಲರಾದ ಕೇಸರಿನಾಥ್ ತ್ರಿಪಾಠಿ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಮೂಗು ಸೋಂಕಿನಿಂದ ಅಸ್ವಸ್ತರಾದ ಬಿಹಾರದ ಹೆಚ್ಚುವರಿ ರಾಜ್ಯಪಾಲ ತ್ರಿಪಾಠಿ ಅವರನ್ನು ಇಂದಿರಾ ಗಾಂಧಿ ವೈದ್ಯಕೀಯ ಸಂಸ್ಥೆ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರಪತಿ ಸ್ಥಾನ ಅಲಂಕರಿಸಿದ ಕೋವಿಂದ್ ಅವರಿಂದ ತೆರವಾದ ಬಿಹಾರ ರಾಜ್ಯಪಾಲ ಜವಾಬ್ದಾರಿಯನ್ನು ಪಶ್ಚಿಮ ಬಂಗಾಳ ಗವರ್ನರ್ ಆಗಿರುವ ತ್ರಿಪಾಠಿ ಹೆಚ್ಚುವರಿಯಾಗಿ ನಿರ್ವಹಿಸುತ್ತಿದ್ದಾರೆ.
ತೇಜಸ್ವಿ
ಮುಖ್ಯಮಂತ್ರಿ ನಿತೀಶ್ ಕುಮಾರ್ ದಿಢೀರ್ ರಾಜೀನಾಮೆ ನೀಡಿದ ಸುದ್ದಿಯನ್ನು ಟೀವಿಯಲ್ಲಿ ವೀಕ್ಷಿಸುತ್ತಿರುವ ಲಾಲು ಯಾದವ್ ಪುತ್ರ, ಬಿಹಾರ ಡಿಸಿಎಂ ತೇಜಸ್ವಿ ಯಾದವ್.
