ಬಿಹಾರ (ಸೆ.17): ಬಿಹಾರದಲ್ಲಿ ಮಧ್ಯ ನಿಷೇಧ ಯಶಸ್ಸಿನ ನಂತರ ದೇಶದಾದ್ಯಂತ ಮದ್ಯವನ್ನು ನಿಷೇಧ ಮಾಡಬೇಕೆಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ದೇಶದಾದ್ಯಂತ ಮದ್ಯವನ್ನು ನಿಷೇಧವಾಗಬೇಕು. ಮಧ್ಯಪ್ರದೇಶ ‘ಮದ್ಯ’ ಪ್ರದೇಶವಾಗಬಾರದು ಎಂದು ನರ್ಮದಾ ಬಚಾವೋ ಆಂದೋಲನಾ ಆಯೋಜಿಸಿದ್ದ ಸಭೆಯಲ್ಲಿ ಹೇಳಿದ್ದಾರೆ.
ರಾಜ್ಯದ ಅಭಿವೃದ್ಧಿ ಫಲವತ್ತಾದ ಭೂಮಿಯಿಂದ ಆಗುವುದಿಲ್ಲ. ಅಭಿವೃದ್ಧಿಯ ನೆಪದಲ್ಲಿ ರೈತರಿಗೆ ಅನ್ಯಾಯವಾಗಬಾರದು. ಅಣೆಕಟ್ಟುಗಳು, ದೊಡ್ಡ ಯೋಜನೆಗಳನ್ನು ರೂಪಿಸುವಾಗ ನೈಸರ್ಗಿಕ ಸಮತೋಲನ ಮತ್ತು ಇದರಿಂದ ಉಂಟಾಗುವ ನಕಾರಾತ್ಮಕ ಪರಿಣಾಮಗಳ ಬಗ್ಗೆ ಚಿಂತನೆ ನಡೆಸಿದ ಬಳಿಕ ಯೋಜನೆ ಪ್ರಾರಂಭಿಸಬೇಕು. ಪ್ರಕೃತಿಯನ್ನು ಹಾನಿಗೊಳಿಸಬಾರದು ಎಂದು ಕುಮಾರ್ ಹೇಳಿದ್ದಾರೆ.
