ದೇಶದಲ್ಲಿ ಭಾರೀ ಸಂಚಲನ ಮೂಡಿಸಿದ್ದ ನರ್ಸ್‌ ಭಂವರಿ ದೇವಿ ನಾಪತ್ತೆ ಮತ್ತು ಕೊಲೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ‘ಭಂವರಿ ದೇವಿ ಸಾವನ್ನಪ್ಪಿಲ್ಲ. ಆಕೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾಳೆ' ಎಂದು ಪ್ರಕರಣದ ಪ್ರಮುಖ ಆರೋಪಿಯಾಗಿರುವ ಇಂದಿರಾ ಬಿಷ್ಣೋಯಿ ಕೋರ್ಟ್‌ಗೆ ತಿಳಿಸಿದ್ದಾಳೆ.

ಜೋಧಪುರ(ಜೂ.11): ದೇಶದಲ್ಲಿ ಭಾರೀ ಸಂಚಲನ ಮೂಡಿಸಿದ್ದ ನರ್ಸ್‌ ಭಂವರಿ ದೇವಿ ನಾಪತ್ತೆ ಮತ್ತು ಕೊಲೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ‘ಭಂವರಿ ದೇವಿ ಸಾವನ್ನಪ್ಪಿಲ್ಲ. ಆಕೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾಳೆ' ಎಂದು ಪ್ರಕರಣದ ಪ್ರಮುಖ ಆರೋಪಿಯಾಗಿರುವ ಇಂದಿರಾ ಬಿಷ್ಣೋಯಿ ಕೋರ್ಟ್‌ಗೆ ತಿಳಿಸಿದ್ದಾಳೆ.

ಜೂನ್‌ 3ರಂದು ಬಂಧನಕ್ಕೆ ಒಳಗಾದ ಇಂದಿರಾ ಬಿಷ್ಣೋಯಿ ಪರ ವಕೀಲರು ಕೋರ್ಟಿಗೆ ಈ ಮಾಹಿತಿ ನೀಡಿದ್ದಾರೆ. ‘ಕಾಲುವೆಯೊಂದರಿಂದ ಸಿಬಿಐ ವಶಪಡಿಸಿಕೊಂಡ ಮೂಳೆಗಳು ಭಂವರಿ ದೇವಿಯದ್ದಲ್ಲ. ವಿಧಿ ವಿಜ್ಞಾನ ಪರೀಕ್ಷೆಯ ವರದಿಯಲ್ಲಿ ಈ ಕುರಿತು ಸ್ಪಷ್ಟನೆ ಇಲ್ಲ. ಹೀಗಾಗಿ ಆಕೆ ಇನ್ನೂ ಬದುಕಿರಬಹುದು' ಎಂಬ ಬಿಷ್ಣೋಯಿ ಹೇಳಿಕೆಗೆ ವಕೀಲರು ಪೂರಕವಾಗಿ ವಾದ ಮಂಡಿಸಿದ್ದಾರೆ.

2011ರಲ್ಲಿ ಭಂವರಿದೇವಿ ಕೊಲೆ ಪ್ರಕರಣ ಹಾಗೂ ಪ್ರತಿಷ್ಠಿತ ರಾಜಕಾರಣಿಗಳ ಜತೆಗಿನ ಆಕೆಯ ಅನೈತಿಕ ಲೈಂಗಿಕ ಸಂಬಂಧ ಸುದ್ದಿಯಾಗಿತ್ತು. ಪ್ರಕರಣದಲ್ಲಿ ರಾಜಸ್ಥಾನ ಸಚಿವ ಮಹಿಪಾಲ ಮದೇರ್ಣಾ ಅವರ ಹೆಸರು ಕೇಳಿ ಬಂದಿತ್ತು.