ಸಾಕಷ್ಟು ಜನಪ್ರಿಯತೆಯನ್ನು ಗಳಿಸಿರುವ ಬಿಗ್’ಬಾಸ್ ಸೀಸನ್-5 ಕಲರ್ಸ್ ಕನ್ನಡ ವಾಹಿನಿಯಲ್ಲಿ ಇವತ್ತಿನಿಂದ ಶುರುವಾಗಿದೆ.
ಬೆಂಗಳೂರು (ಅ.15): ಸಾಕಷ್ಟು ಜನಪ್ರಿಯತೆಯನ್ನು ಗಳಿಸಿರುವ ಬಿಗ್’ಬಾಸ್ ಸೀಸನ್-5 ಕಲರ್ಸ್ ಕನ್ನಡ ವಾಹಿನಿಯಲ್ಲಿ ಇವತ್ತಿನಿಂದ ಶುರುವಾಗಿದೆ.
ಸೂಪರ್ ಕಲರ್ಸ್ ವಾಹಿನಿಯಲ್ಲಿ ಬಿಗ್ಬಾಸ್ 5ನೇ ಸೀಸನ್ ಆರಂಭವಾಗಿದೆ. ಶೋ ಆರಂಭಿಸುವ ಮೊದಲು ಬಿಗ್ಬಾಸ್ ಮನೆ ಹೇಗಿದೆ ಎಂಬುವುದ ಬಗ್ಗೆ ನಟ ಸುದೀಪ್ ಬಿಗ್ಬಾಸ್ ಮನೆಯೊಳಗೆ ಹೋಗಿ ಇಡೀ ಮನೆ ಚಿತ್ರಣ ತೋರಿಸಿದರು. ಆ ಬಳಿಕ ವೇದಿಕೆಗೆ ಬಂದ ನಟ ಸುದೀಪ್ ಸ್ಪರ್ಧಿಯಾಳುಗಳನ್ನು ಆಹ್ವಾನಿಸಿದ್ರು. ಬಿಗ್ಬಾಸ್ ಮನೆ ಒಳಗೆ ಕಳುಹಿಸುವ ಮೊದಲು ಸುದೀಪ್ ಮೊದಲಿನಂತೆ ಮಾತುಕತೆ ನಡೆಸಿದ್ರು. ಇದೇ ಮೊದಲ ಬಾರಿಗೆ ಸುದೀಪ್ ಸ್ಪರ್ಧಿಯಾಳುಗಳ ತೂಕ ಚೆಕ್ ಮಾಡಿಸಿ, ಬಿಗ್ಬಾಸ್ ಮನೆಯೊಳಗೆ ಕಳುಹಿಸಿದರು.
ಬಿಗ್ಬಾಸ್ ಮನೆಗೆ ಎಂಟಿಕೊಟ್ಟ ಸ್ಪರ್ಧಿಗಳ ವಿವರ
ಮೊದಲನೇ ಸ್ಪರ್ಧಿ ಜ್ಯೋತಿಷಿ ಜಯಶ್ರೀನಿವಾಸನ್
ಎರಡನೇ ಸ್ಪರ್ಧಿ ಕೊಡಗಿನ ಕುವರಿ ಮೇಘಾ( ಜನಸಾಮಾನ್ಯ)
ಮೂರನೇ ಸ್ಪರ್ಧಿ ನಿರ್ದೇಶಕ ದಯಾಳ್ ಪದ್ಮನಾಭ
ನಾಲ್ಕನೇ ಸ್ಪರ್ಧಿ ಸಿಹಿಕಹಿ ಚಂದ್ರು
5ನೇ ಸ್ಪರ್ಧಿ ಬಾಲಿವುಡ್ ಕಿರುತೆರೆ ನಟಿ ಶ್ರುತಿ (ಬೆಳಗಾವಿ ಹುಡುಗಿ)
6ನೇ ಸ್ಪರ್ಧಿ ಕನ್ನಡದ ಕಿರುತೆರೆ ನಟಿ ಅನುಪಮಾ
7ನೇ ಸ್ಪರ್ಧಿ ಆರ್ಜೆ ರಿಯಾಸ್
8ನೇ ಸ್ಪರ್ಧಿ ಮೈಸೂರಿನ ಹುಡುಗಿ ನಿವೇದಿತಾಗೌಡ (ಜನಸಾಮಾನ್ಯ) BCA 2nd year
