‘ಸಂಜು ಮತ್ತು ನಾನು’ ಧಾರಾವಾಹಿ ಶೂಟಿಂಗ್ ವೇಳೆ ಬಿಗ್'ಬಾಸ್ ಪ್ರಥಮ್ ಸಹನಟ ಭುವನ್ ಕಾಲಿಗೆ ಕಚ್ಚಿರುವ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ಪ್ರಥಮ್  ಭುವನ್ ಮೇಲೆ  ಹಲ್ಲೆ ಮಾಡಿದ್ದಾನೆ ಎನ್ನಲಾಗಿದ್ದು ತೊಡೆ ಭಾಗಕ್ಕೆ ಕಚ್ಚಿರುವುದಾಗಿ ಭುವನ್  ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಬೆಂಗಳೂರು (ಜು.23): ‘ಸಂಜು ಮತ್ತು ನಾನು’ ಧಾರಾವಾಹಿ ಶೂಟಿಂಗ್ ವೇಳೆ ಬಿಗ್'ಬಾಸ್ ಪ್ರಥಮ್ ಸಹನಟ ಭುವನ್ ಕಾಲಿಗೆ ಕಚ್ಚಿರುವ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ಪ್ರಥಮ್ ಭುವನ್ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದ್ದು ತೊಡೆ ಭಾಗಕ್ಕೆ ಕಚ್ಚಿರುವುದಾಗಿ ಭುವನ್ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಶೂಟಿಂಗ್ ವೇಳೆ ಪ್ರಥಮ್ ಸಾಕಷ್ಟು ಟಾರ್ಚರ್​ ಕೊಟ್ಟಿದ್ದಾನೆ. ಕಳೆದ 3 ತಿಂಗಳಿಂದ ನನಗೆ ಟಾರ್ಚರ್ ಕೊಟ್ಟಿದ್ದಾನೆ ಎಂದು ಭುವನ್ ಸುವರ್ಣನ್ಯೂಸ್​ಗೆ ಹೇಳಿಕೆ ನೀಡಿದ್ದಾರೆ. ನನ್ನ, ಭುವನ್ ಮಧ್ಯೆ ವಾಗ್ವಾದ ಆಗಿದ್ದು ನಿಜ. ಆದರೆ ಯಾವುದೇ ದೊಡ್ಡ ಗಲಾಟೆ ಆಗಿಲ್ಲ. ನಾನು, ಭುವನ್ ಒಳ್ಳೆಯ ಸ್ನೇಹಿತರು. ಶೂಟಿಂಗ್ ವೇಳೆ ಚಿಕ್ಕ ಪುಟ್ಟ ವಿಚಾರಕ್ಕೆ ವಾಗ್ವಾದ ಆಗಿತ್ತು. ಆದರೆ ನಾನು ಶೂಟಿಂಗ್ ವೇಳೆ ಯಾರಿಗೂ ತೊಂದರೆ ಕೊಟ್ಟಿಲ್ಲ. ನಾವಿಬ್ಬರೂ ಒಳ್ಳೆಯ ಸ್ನೇಹಿತರು, ಬೇಕಾದ್ರೆ ಫೇಸ್​ಬುಕ್ ನೋಡಿ ಎಂದು ಸುವರ್ಣನ್ಯೂಸ್​ಗೆ ಬಿಗ್ ಬಾಸ್​​​​ ವಿನ್ನರ್ ಪ್ರಥಮ್ ಹೇಳಿಕೆ ನೀಡಿದ್ದಾರೆ.