ಬಿಎಸ್'ವೈ ವಿರುದ್ಧದ ಡಿನೋಟಿಫಿಕೇಷನ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಯಡಿಯೂರಪ್ಪರನ್ನು ಸಿಲುಕಿಸಲು ಸಂಚು ನಡೆದಿತ್ತಾ ಎಂಬ ಅನುಮಾನ ವ್ಯಕ್ತವಾಗಿದೆ. ಡಿನೋಟಿಫಿಕೇಷನ್ ವಿರೋಧಿಸಿ ತಕರಾರು ಅರ್ಜಿ ಸಲ್ಲಿಸಲು ನಕಲಿ ಮಹಿಳೆಯನ್ನು ಸೃಷ್ಟಿಸಲಾಗಿತ್ತು ಎಂಬ ಮಾತುಗಳು ಕೇಳಿ ಬಂದಿವೆ.

ಬೆಂಗಳೂರು(ಆ.21): ಬಿಎಸ್'ವೈ ವಿರುದ್ಧದ ಡಿನೋಟಿಫಿಕೇಷನ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಯಡಿಯೂರಪ್ಪರನ್ನು ಸಿಲುಕಿಸಲು ಸಂಚು ನಡೆದಿತ್ತಾ ಎಂಬ ಅನುಮಾನ ವ್ಯಕ್ತವಾಗಿದೆ. ಡಿನೋಟಿಫಿಕೇಷನ್ ವಿರೋಧಿಸಿ ತಕರಾರು ಅರ್ಜಿ ಸಲ್ಲಿಸಲು ನಕಲಿ ಮಹಿಳೆಯನ್ನು ಸೃಷ್ಟಿಸಲಾಗಿತ್ತು ಎಂಬ ಮಾತುಗಳು ಕೇಳಿ ಬಂದಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಶಾ ಪರದೇಶಿ ಎಂಬುವವರು ಡಿನೋಟಿಫಿಕೇಷನ್ ವಿರುದ್ಧ ತಕರಾರು ಅರ್ಜಿ ಸಲ್ಲಿಸಿದ್ದರು. ಬಳಿಕ ಈ ತಕರಾರು ಅರ್ಜಿಯನ್ನು ಹಿಂದೆ ಕೂಡಾ ಪಡೆಯಲಾಗಿತ್ತು. ಆದರೀಗ ಆಶಾ ಎಂಬ ವ್ಯಕ್ತಿ ಇಲ್ಲವೇ ಇಲ್ಲ ಎಂಬುವುದು ಎಸಿಬಿಯ ವಾದವಾಗಿದೆ. ತನಿಖೆಯ ಸಂದರ್ಭದಲ್ಲಿ ಈ ಮಹಿಳೆಯ ಹೆಸರಲ್ಲಿ ಬಂದ ತಕರಾರು ಅರ್ಜಿಯಲ್ಲಿ ನೋಂದಾಯಿಸಿರುವ ವಿಳಾಸ ನಕಲಿ ಎಂಬ ಅಂಶ ಬಯಲಾಗಿದೆ.